ರಾಜಕೀಯ

ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ, ಸಿಎಂ ಹುದ್ದೆಗೆ ಸಿದ್ದು VS ಡಿಕೆಸಿ

Views: 0

ಆಡಳಿತ ವಿರೋಧಿ ಅಲೆ, ಗ್ಯಾರಂಟಿ ಕಾಡ್೯ನ್ನು ಮನೆ ಮನೆಗೆ ತಲುಪಿಸಿದ್ದರಿಂದ ಕಾಂಗ್ರೆಸ್ ಬಹುಮತಕ್ಕೆ ಸಹಕಾರಿಯಾಗಿದೆ. ಕಾಂಗ್ರೆಸ್ ನಾಯಕರ ಒಗ್ಗಟ್ಟಿನ ಸೆಮಿಪೈನಲ್ ಹೋರಾಟದಲ್ಲಿ ಸ್ಪಷ್ಟ ಬಹುಮತಕ್ಕೆ ಬಂದಿದೆ, ಇನ್ನೂ ಮುಖ್ಯಮಂತ್ರಿ ಹುದ್ದೆಗಾಗಿ ಡಿಕೆಸಿ ಮತ್ತು ಸಿದ್ದರಾಮಯ್ಯ ಮಧ್ಯೆ ಜಿದ್ದಾಜಿದ್ದಿನ ಪೈನಲ್ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ.

ಸಿದ್ದರಾಮಯ್ಯ ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದು, ಮುಖ್ಯಮಂತ್ರಿ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಕನಾ೯ಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದವರು ಈ ಹಿಂದೆ ಮುಖ್ಯಮಂತ್ರಿಯಾದ ಉದಾಹರಣೆಯನ್ನು ಡಿಕೆಸಿ ಪ್ರಸ್ತಾವಿಸಿ, ನಾನೇ ಸಿಎಂ ಎಂದು ಹೇಳಿಕೊಂಡಿದ್ದಾರೆ.

ಇಂದು  ಮಲ್ಲಿಕಾರ್ಜುನ  ಖಗೆ೯ ನಿವಾಸದಲ್ಲಿನ ಸಭೆಯಲ್ಲಿ ಸಿಎಂ  ಸ್ಥಾನಕ್ಕಾಗಿ  ಜಟಾಪಟಿ  ನಡೆಯಿತು.   ಡಿಕೆಸಿ ನಾನೇ  ಸಿಎಂ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅದಕ್ಕೆ  ಸಿದ್ದರಾಮಯ್ಯ  ಒಪ್ಪುತ್ತಿಲ್ಲ ಪ್ರಥಮ  ಅವಧಿಗೆ ನಾನೇ ಸಿಎಂ  ಆಗುತ್ತೇನೆ  ನಂತರ  ಬಿಟ್ಟು ಕೊಡುತ್ತೇನೆ ಎಂದಿದ್ದಕ್ಕೆ ಡಿಕೆಸಿ  ಪಕ್ಷ ಕಟ್ಟಲು  ತುಂಬಾ ಕಷ್ಟಬಿಟ್ಟಿದ್ದೇನೆ,  ಬೆವರು  ಸುರಿಸಿದ್ದೇನೆ ನಾನೇ  ಪ್ರಥಮ ಅವಧಿಗೆ  ಸಿಎಂ ಬೇಕೆಂದು ಪಟ್ಟು ಸಡಿಲಿಸಿಲ್ಲ.

Related Articles

Back to top button
error: Content is protected !!