ಕಾಂಗ್ರೆಸ್ ಐವರು ಬಂಡಾಯ ಅಭ್ಯರ್ಥಿಗಳ ಉಚ್ಛಾಟನೆ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಯಾರು?

Views: 76
ಬೆಂಗಳೂರು ಕರ್ನಾಟಕ ವಿಧಾನ ಪರಿಷತ್‌ನ 3 ಪದವೀಧರ ಮತ್ತು 3 ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೂನ್ 3ರಂದು ಮತದಾನ ನಡೆಯಲಿದೆ. ಈ ಚುನಾವಣೆಗೆ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದ ಐವರು ಅಭ್ಯರ್ಥಿಗಳನ್ನು ಕಾಂಗ್ರೆಸ್ ಉಚ್ಛಾಟನೆ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿರುವ ಐವರು ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳನ್ನು ಉಚ್ಛಾಟನೆ ಮಾಡುವ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ. ಸಿ. ಚಂದ್ರಶೇಖರ್ ಗುರುವಾರ ಆದೇಶ ಹೊರಡಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಯಾಗಿರುವ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಆದೇಶ ತಿಳಿಸಿದೆ.
ಉಚ್ಛಾಟನೆಗೊಂಡವರು
ನೈಋತ್ಯ ಪದವೀಧರ ಕ್ಷೇತ್ರ – ಎಸ್. ಪಿ. ದಿನೇಶ್, ಶಿವಮೊಗ್ಗ
ಬೆಂಗಳೂರು ಪದವೀಧರ ಕ್ಷೇತ್ರ – ಫರ್ಡಿನಾಂಡ್ ಲಾರೆನ್ಸ್, ಬೆಂಗಳೂರು
ನೈಋತ್ಯ ಶಿಕ್ಷಕರ ಕ್ಷೇತ್ರ – ಬಿ. ಆರ್. ನಂಜೇಶ್, ಚಿಕ್ಕಮಗಳೂರು
ಆಗ್ನೇಯ ಶಿಕ್ಷಕರ ಕ್ಷೇತ್ರ – ಲೋಕೇಶ್ ತಾಳಿಕಟ್ಟೆ, ಚಿತ್ರದುರ್ಗ
ಆಗ್ನೇಯ ಶಿಕ್ಷಕರ ಕ್ಷೇತ್ರ – ವಿನೋದ್ ಶಿವರಾಜ್, ಬೆಂಗಳೂರು
ಜೂನ್ 3ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಜೂನ್ 6ರಂದು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ
ನೈಋತ್ಯ ಪದವೀಧರರ – ಆಯನೂರು ಮಂಜುನಾಥ (ಕಾಂಗ್ರೆಸ್), ಧನಂಜಯ ಸರ್ಜಿ (ಬಿಜೆಪಿ-ಜೆಡಿಎಸ್)
ನೈಋತ್ಯ ಶಿಕ್ಷಕರ – ಕೆ. ಕೆ. ಮಂಜುನಾಥ (ಕಾಂಗ್ರೆಸ್), ಎಲ್. ಭೋಜೇಗೌಡ (ಜೆಡಿಎಸ್-ಬಿಜೆಪಿ)
ಆಗ್ನೇಯ ಶಿಕ್ಷಕರ – ವೈ. ಎ. ನಾರಾಯಣ ಸ್ವಾಮಿ (ಬಿಜೆಪಿ-ಜೆಡಿಎಸ್), ಡಿ. ಟಿ. ಶ್ರೀನಿವಾಸ್ (ಕಾಂಗ್ರೆಸ್)
ಈಶಾನ್ಯ ಪದವೀಧರ – ಚಂದ್ರಶೇಖರ ಬಸವರಾಜ (ಕಾಂಗ್ರೆಸ್), ಅಮರನಾಥ ಪಾಟೀಲ (ಬಿಜೆಪಿ-ಜೆಡಿಎಸ್)
ಬೆಂಗಳೂರು ಪದವೀಧರ – ರಾಮೋಜಿ ಗೌಡ (ಕಾಂಗ್ರೆಸ್), ಅ. ದೇವೇಗೌಡ (ಬಿಜೆಪಿ-ಜೆಡಿಎಸ್)
ದಕ್ಷಿಣ ಶಿಕ್ಷಕ – ಮರಿತಿಬ್ಬೇಗೌಡ (ಕಾಂಗ್ರೆಸ್), ಕೆ. ವಿವೇಕಾನಂದ (ಜೆಡಿಎಸ್-ಬಿಜೆಪಿ)






