ಇತರೆ

ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ: ನಾಲ್ವರು ಕಾರ್ಮಿಕರ ಸಾವು

Views: 166

ನಗರದಲ್ಲಿ ನಾಲ್ವರು ಕಾರ್ಮಿಕರು ಸಾವನಪ್ಪಿದ ದಾರುಣ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ಕರಿಯಾಪಟ್ಟಿಯಲ್ಲಿ ನಡೆದಿದೆ. ಇಂದು ಕರಿಯಾಪಟ್ಟಿ ಸಮೀಪದ ಅವಿಯೂರು ಕೀಲುಪ್ಪಲಿಕುಂಡು ರಸ್ತೆಯಲ್ಲಿರುವ ಕಲ್ಲಿನ ಕ್ವಾರಿಯಲ್ಲಿ ಭೀಕರ ಸ್ಪೋಟ ಸಂಭವಿಸಿದೆ.

ಕಲ್ಲುಬಂಡೆಗಳಿಂದ ಜಲ್ಲಿ,ಎಂಸ್ಯಾಂಡ್ ಮೊದಲ ಸಾಮಗ್ರಗಳನ್ನುಸಿದ್ಧಪಡಿಸಲು ಬಂಡೆಗಳನ್ನು ಒಡೆಯವ ಪ್ರಕ್ರಿಯೆ ನಡೆಯುತ್ತಿತ್ತು. ಇದೇ ವೇಳೆ ಬಂಡೆಗಳನ್ನು ಒಡೆಯಲು ತಂದಿದ್ದ ಸ್ಫೋಟಕಗಳನ್ನು ವಾಹನದಿಂದ ಕಟ್ಟಡಕ್ಕೆ ಸಾಗಿಸುವ ವೇಳೆಯಲ್ಲಿ ಸ್ಫೋಟ ಸಂಭವಿಸಿದೆ. ದುರದೃಷ್ಟವಶತ್ ಸ್ಫೋಟದ ವೇಳೆ ಅಲ್ಲಿಯೇ ಇದ್ದ ನಾಲ್ವರು ಕಾರ್ಮಿಕರು ಮೃತರಾಗಿದ್ದಾರೆ. ಸ್ಫೋಟಕಗಳಿದ್ದ ಎರಡೂ ವಾಹನಗಳು ಜಖಂಗೊಂಡಿವೆ. ಸ್ಫೋಟದ ತೀವ್ರತೆಗೆ 20 ಕಿ,ಮೀ,ದೂರದಲ್ಲಿದ್ದ ಮನೆಗಳ ಗೋಡೆ ಬಿರುಕುಬಿಟ್ಟಿದೆ.

ಸ್ಥಳದಲ್ಲಿ ಇನ್ನಷ್ಟು ಸ್ಫೋಟಕಗಳಿರುವುದರಿಂದ ಪೊಲೀಸರು ಮತ್ತು ಅಗ್ನಿಶಾಮಕದಳದವರಿಗೆ ಸ್ಫೋಟಗೊಂಡ ಸ್ಥಳಕ್ಕೆ ಹೋಗಲು ಸಾಧ್ಯವಾಗಿಲ್ಲ

Related Articles

Back to top button
error: Content is protected !!