ಇತರೆ
ಓಡಿ ಹೋದ ಪ್ರೇಮಿಗಳಿಗೆ ಬೆಂಬಲಿಸಿದ್ದಾರೆ ಎಂದು ಶಂಕಿಸಿ ಇಬ್ಬರ ಭೀಕರ ಕೊಲೆ
Views: 88
ಕನ್ನಡ ಕರಾವಳಿ ಸುದ್ದಿ: ಪ್ರೇಮಿಗಳನ್ನು ಬೆಂಬಲಿಸಿದ್ದಕ್ಕೆ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೈ ಭೀಮ್ ನಗರದಲ್ಲಿ ನಡೆದಿದೆ.
ಕಿರಣ (25) ಮತ್ತು ಮಂಜುನಾಥ(65) ಕೊಲೆಯಾದ ದುರ್ದೈವಿಗಳು.
2 ದಿನದ ಹಿಂದಷ್ಟೇ ಪ್ರೀತಿಸುತ್ತಿದ್ದ ಶೃತಿ ಹಾಗೂ ನಂದೀಶ್ ಮನೆಯಿಂದ ಪರಾರಿಯಾಗಿದ್ದರು. ರಕ್ಷಣೆ ಕೋರಿ ನಿನ್ನೆ ಸಂಜೆ ಶೃತಿ ಹಾಗೂ ನಂದೀಶ್ ಜೋಡಿ ಪೊಲೀಸ್ ಠಾಣೆಗೆ ಆಗಮಿಸಿತ್ತು. ಈ ವೇಳೆ ನಂದೀಶ್ ಜೊತೆ ತೆರಳುವುದಾಗಿ ಶೃತಿ ಹೇಳಿದ್ದಾಳೆ.
ಇದರಿಂದ ಕೋಪಗೊಂಡ ಯುವತಿಯ ಸಹೋದರ ಹಾಗೂ ಆತನ ಕಡೆಯವರು, ಪ್ರೇಮಿಗಳಿಗೆ ಬೆಂಬಲಿಸುತ್ತಿದ್ದಾರೆ ಎಂದು ತಿಳಿದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕಿರಣ್, ಮಂಜುನಾಥ್ ಸಾವನ್ನಪ್ಪಿದ್ದಾರೆ, ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.






