ಜನಮನ
ಒಡಿಶಾ ರೈಲು ದುರಂತ : ಮೃತರ ಸಂಖ್ಯೆ 300 ಕ್ಕೆ

Views: 0
ಒಡಿಶಾದ ಬಾಗಸೋರ್ ರೈಲ್ವೆ ನಿಲ್ದಾಣ ಬಳಿಯಲ್ಲಿ ಮೂರು ರೈಲ್ ಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೃತರ ಸಂಖ್ಯೆ 300 ಕ್ಕೆ ಏರಿದೆ. 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ ಅವರು ಬೇಟಿ ನೀಡಲಿದ್ದಾರೆ. ನಂತರ ಅವರು ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಕೆಲವು ಮೂಲಗಳ ಪ್ರಕಾರ ಸಾವಿನ ಸಂಖ್ಯೆ ಜಾಸ್ತಿಯಾಗಬಹುದು. ಅಧಿಕೃತ ಘೋಷಣೆಯಾಗಿಲ್ಲ, ಕನಾ೯ಟಕದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಮೂಲಗಳಿಂದ ತಿಳಿಯಲಾಗಿದೆ.
ಒಡಿಶಾದಲ್ಲಿ ನಡೆದ ಅತೀ ದೊಡ್ಡ ರೈಲ್ವೆ ದುರಂತ ಇದಾಗಿದ್ದು, ದುರಂತಕ್ಕೆ ನಿಖರ ಕಾರಣಗಳೇನು ಎಂದು ತಿಳಿದು ಬಂದಿಲ್ಲ, ಉನ್ನತ ಮಟ್ಟದ ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಾಗಿದೆ.






