ರಾಜಕೀಯ

ಐದೂ ಗ್ಯಾರಂಟಿ ಜಾರಿಗೆ ಸಕಾ೯ರ ನಿಧಾ೯ರ : ಸಿದ್ದರಾಮಯ್ಯ 

Views: 0

ಚುನಾವಣೆ ಸಂದಭ೯ದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಐದು ಗ್ಯಾರಂಟಿಗಳ ಜಾರಿಗೆ ರಾಜ್ಯ ಸರ್ಕಾರ ನಿಧ೯ರಿಸಿದೆ.

ಈ ಆಥಿ೯ಕ ವಷ೯ದಲ್ಲಿ ಘೋಷಣೆ ಮಾಡಿರುವ ಎಲ್ಲಾ ಗ್ಯಾರಂಟಿ ಗಳನ್ನು ಜಾರಿ ಮಾಡ್ತಾಇದ್ದೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಾತನಾಡಿ,ನಾವು ನುಡಿದಂತೆ ನಡೆಯುತ್ತೇವೆ ಐದು ಗ್ಯಾರಂಟಿ ಘೋಷಣೆ ಮಾಡುತ್ತಿದ್ದೇವೆ ಎಂದರು.

ಮೊದಲ ಗ್ಯಾರಂಟಿಯಾಗಿ ಜುಲೈ 1 ರಿಂದ ಗೃಹ ಜ್ಯೋತಿ ಯೋಜನೆ 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ ಶೇ. 10 ರಷ್ಟು ವಿದ್ಯುತ್ ಉಚಿತ, 200 ಯೂನಿಟ್ ವಿದ್ಯುತ್ ಉಚಿತ ಈ ಹಿಂದಿನ ಹಳೆ ಬಾಕಿಯನ್ನು ಗ್ರಹಕರೇ ಪಾವತಿಸಬೇಕು.  ಬಾಡಿಗೆದಾರರಿಗೂ  ಉಚಿತ  ವಿದ್ಯುತ್  ಅನ್ವಯ.

2 ನೇ ಯೋಜನೆಯಾದ ಗೃಹಲಕ್ಷ್ಮೀ ಅಗಸ್ಟ್ 15 ರಿಂದ ಜಾರಿ : ಈ ಯೋಜನೆ ನೋಂದಾಯಿಸಲು 1 ತಿಂಗಳ ಕಾಲಾವಕಾಶ, ಆಧಾರ್, ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದು.

ಎಪಿಎಲ್,ಬಿಪಿಎಲ್ ವ್ಯತ್ಯಾಸವಿಲ್ಲದೆ ಮನೆಯ ಯಜಮಾನಿಗೆ ಮಾಸಿಕ ರೂ. 2000 ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯ

ಜುಲೈ 1 ರಿಂದ ಬಿಪಿಎಲ್, ಎಪಿಎಲ್, ಅಂತ್ಯೋದಯ ಫಲಾನುಭವಿಗಳಿಗೆ 10 ಕೆ. ಜಿ ಅಕ್ಕಿ ಉಚಿತ.

ಜೂನ್ 11 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕೆಎಸ್ ಆರ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಮಾತ್ರ .

2022-23 ರಲ್ಲಿ ಪದವಿ ಪಡೆದವರಿಗೆ ತಿಂಗಳಿಗೆ 3000 ಸಾವಿರ ರೂಪಾಯಿ 24 ತಿಂಗಳ ವರೆಗೆ ಕೆಲಸ ಸಿಗದಿದ್ದರೆ ಈ ಸೌಲಭ್ಯ ಅನ್ವಯ.

Related Articles

Back to top button
error: Content is protected !!