ರಾಜಕೀಯ
ಎಪ್ರಿಲ್ 11 : ಮತದಾರರ ಪಟ್ಟಿ ಸೇಪ೯ಡೆಗೆ ಕೊನೆಯದಿನ

Views: 1
ಕುಂದಾಪುರ : ಕನಾ೯ಟಕ ರಾಜ್ಯ ವಿಧಾನ ಸಭೆಗೆ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಮತದಾರ ಪಟ್ಟಿಗೆ ಹೆಸರು ಸೇರಿಸಲು ಎ 11, ಕೊನೆಯ ದಿನವಾಗಿದೆ.
2004 ರಲ್ಲಿ ಜನಿಸಿ, 2023 ಎ.1 ರಂದು 18 ವಷ೯ ತುಂಬಿದವರು ಹೆಸರು ನೋಂದಾಯಿಸಿ ಕೊಳ್ಳಬಹುದು ಎಂದು ಚುನಾವಣಾಧಿಕಾರಿಯ ಪ್ರಕಟನೆ ತಿಳಿಸಿದೆ.
ನೋಂದಾವಣೆಗೆ ಬೇಕಾದ ದಾಖಲೆಗಳು: ಮತದಾರರ ಹೆಸರು ಸೇಪ೯ಡೆಗೆ ಪಾಸ್ ಪೋಟ್೯ ಅಳತೆಯ ಕಲರ್ ಭಾವಚಿತ್ರಧ ಜೊತೆಗೆ ಜನನ ಪ್ರಮಾಣ ಪತ್ರ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾಡ್೯,ಅಥವಾ ಪಾನ್ ಕಾರ್ಡ್, ಶಾಲಾ- ಕಾಲೇಜಿನಲ್ಲಿ ನೀಡಿರುವ ಜನ್ಮದಿನಾಂಕವನ್ನು ಹೊಂದಿರುವ, ಪ್ರಮಾಣ ಪತ್ರದಲ್ಲಿ ಯಾವುದಾದರೂ ಒಂದು ದಾಖಲೆ ಮತ್ತು ವಿಳಾಸದ ದೃಢೀಕರಣ, ದಾಖಲೆಗಾಗಿ ಇಂಡಿಯನ್ ಪಾಸ್ ಪೋಟ್೯, ಅಂಚೆ ಕಚೇರಿ ಪಾಸ್ ಪುಸ್ತಕ, ಅಥವಾ ವಿದ್ಯುತ್, ನೀರು, ಗ್ಯಾಸ್ ಬಿಲ್ ದಾಖಲೆಗಳನ್ನು, ಯಾವುದಾದರೂ ಕನಿಷ್ಠ ಒಂದು ದಾಖಲೆಯನ್ನು ಹಾಜರು ಪಡಿಸುವುದು ಎಂದು ಪ್ರಕಟನೆ ತಿಳಿಸಿದೆ.






