ಕರಾವಳಿ

ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯ 1.80 ಲಕ್ಷ ರೂ.ಸೊತ್ತುಗಳಿದ್ದ ಬ್ಯಾಗ್ ಕಳವು

Views: 57

ಉಡುಪಿ:  ವಿದ್ಯಾರ್ಥಿಯ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿದ್ದ ಬ್ಯಾಗನ್ನು ಬೆಂಗಳೂರಿನಿಂದ ಮುರುಡೇಶ್ವರ ಎಕ್ಷ್ ಪ್ರೆಸ್ ರೈಲಿನಲ್ಲಿ ಹೋಗುತ್ತಿರುವಾಗ ಕಳವು ಮಾಡಿರುವ ಘಟನೆ ಜ.23ರಂದು ರಾತ್ರಿ ವೇಳೆ ನಡೆದಿದೆ.

ಬೆಂಗಳೂರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಕುಮಟಾದ ಅಭಿನ್ ವೈದ್ಯ(19) ಎಂಬವರು ಕಾಲೇಜಿಗೆ ರಜೆ ಇದ್ದ ಕಾರಣ ಜ.23ರಂದು ರಾತ್ರಿ ಬೆಂಗಳೂರಿನಿಂದ ರೈಲಿನಿಂದ ಹೊರ ಟಿದ್ದು, ರಾತ್ರಿ 11-45 ಗಂಟೆ ಸುಮಾರಿಗೆ ರೈಲು ಮೈಸೂರು ನಿಲ್ದಾಣ ತಲುಪಿದ್ದು ಆಗ ಅಭಿನ್ ತಮ್ಮ ಬ್ಯಾಗ್‌ನ್ನು ಸೀಟಿನ ಮೇಲೆ ಇಟ್ಟು ಮೂತ್ರ ವಿರ್ಸಜನೆಗೆ ಹೋಗಿದ್ದರು.

ಈ ವೇಳೆ ಕಳ್ಳರು, ಲಾಪ್‌ಟಾಪ್, ಇಯರ್ ಬಡ್ಡ್ ಹಾಗೂ ಚಿನ್ನದ ಸರ ಮತ್ತು ಬಟ್ಟೆಗಳಿದ್ದ ಬ್ಯಾಗ್‌ನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂತು. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 1.80ಲಕ್ಷ ರೂ. ಎಂದು ಅಂದಾಜಿಸಲಾ ಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!