ಕರಾವಳಿ

ಉಡುಪಿ :ದಿಢೀರನೆ ದನ ರಸ್ತೆಗೆ ಅಡ್ಡ ಬಂದು ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ವಿಕ್ರಂ ಗೌಡ ಶವ ಸಾಗಿಸುತ್ತಿದ್ದ ಆಂಬುಲೆನ್ಸ್

Views: 458

ಉಡುಪಿ: ವಿಕ್ರಂ ಗೌಡ ಅವರ ಶವ ಸಾಗಿಸುತ್ತಿದ್ದ ಆಂಬುಲೆನ್ಸ್ ನಿಯಂತ್ರಣ ತಪ್ಪಿ ಅಪಘಾತಗೊಂಡಿದೆ. ಆದರೆ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ.ವೇಗವಾಗಿ ಹೋಗುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಗೆ ಹೋಗಿದ್ದು, ರಸ್ತೆ ಬದಿಯಲ್ಲಿದ್ದ ಗುಂಡಿಯೊಳೊಗೆ ವಾಲಿಕೊಂಡು ನಿಂತಿದೆ. ಕೂಡಲೆ ಸ್ಥಳದಲ್ಲಿದ್ದ ಜನರು ಧಾವಿಸಿ, ಆಂಬುಲೆನ್ಸ್ ಅನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ, ಆಂಬುಲೆನ್ಸ್ ವಿಕ್ರಂಗೌಡ ಮೃತದೇಹ ಹೊತ್ತು ಸಾಗಿಸಿದ್ದಾರೆ. ಕಾರ್ಕಳ ತಾಲೂಕಿನ ಹೆಬ್ರಿ ಕಬ್ಬಿನಾಲೆಯ ಪೀಠ ಬ ಯಲುವಿನಲ್ಲಿ ಸೋಮವಾರ ರಾತ್ರಿ ನಡುವೆ ನಡೆದ. ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಬಲಿಯಾಗಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ವಿಕ್ರಂ ಗೌಡನ ಅವರ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಮಣಿಪಾಲದಿಂದ ಕೂಡ್ಲುವಿಗೆ ಕೊಂಡೊಯ್ಯುತ್ತಿದ್ದಾಗ ಹೆಬ್ರಿ ಬಳಿ ಆಂಬುಲೆನ್ಸ್ ರಸ್ತೆ ಬದಿಗೆ ವಾಲಿದೆ.ಆಂಬುಲೆನ್ಸ್ ವೇಗವಾಗಿ ಸಂಚರಿಸುತ್ತಿದ್ದಾಗ ದಿಢೀರನೆ ದನ ರಸ್ತೆಗೆ ಅಡ್ಡ ಬಂದಿದೆ, ಇದರಿಂದಾಗಿ ಆಂಬುಲೆನ್ಸ್  ರಸ್ತೆ ಬದಿಗೆ ಸರಿದಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ.ತಿಳಿಸಿದರು.

Related Articles

Back to top button
error: Content is protected !!