ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮತ ಪಡೆದು ಗೆದ್ದ ಕಿರಣ ಕುಮಾರ್ ಕೊಡ್ಗಿ

Views: 0
ಈ ಭಾರಿಯ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಮತ ಪಡೆದು ಆಯ್ಕೆಯಾದ ಶಾಸಕ ಕಿರಣ ಕುಮಾರ ಕೊಡ್ಗಿ ಅವರು ಹಲವು ದಾಖಲೆಗಳನ್ನು ಬರೆದಿದ್ದಾರೆ.
1,02,424 ಮತಗಳನ್ನು ಪಡೆದು 41,556 ಅತ್ಯಧಿಕ ಮತಗಳ ಅಂತರವನ್ನು ಪಡೆದಿದ್ದಾರೆ.
1952 ರಿಂದ ಇಲ್ಲಿಯವರೆಗೆ 71 ವಷ೯ಗಳ ಕುಂದಾಪುರ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ 1967,1972 ರಲ್ಲಿ ಪ್ರಜಾ ಸೊಶಿಯಲಿಸ್ಟ್ ಮತ್ತು ಕಾಂಗ್ರೆಸ್ ನಿಂದ ವಿನ್ನಿ ಫ್ರೆಡ್ ಫೆನಾ೯ಂಡಿಸ್ ವಿಧಾನ ಸಭಾ ಸದಸ್ಯರಾಗಿದ್ದರು. ಉಳಿದ ಅವಧಿಯಲ್ಲಿ ಬಂಟ್ ಸಮುದಾಯದವರೇ ಈ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಆದರೆ, ಈ ವರೆಗೆ ಬಂಟ್ಸ್ ಯೇತರ ಬ್ರಾಹ್ಮಣ ಸಮುದಾಯದ ಮೊದಲ ಶಾಸಕರಾಗಿ ಕಿರಣ ಕುಮಾರ ಕೊಡ್ಗಿ ಆಯ್ಕೆಯಾಗಿದ್ದಾರೆ.
ಕುಂದಾಪುರ ಇತಿಹಾಸದಲ್ಲಿ ಶಾಸಕರ ಮಕ್ಕಳು ಯಾರೂ ಕೂಡ ಶಾಸಕರಾಗಿಲ್ಲ, ಈ ಭಾರಿ ಮಾಜಿ ಶಾಸಕ ದಿ. ಎ. ಜಿ ಕೊಡ್ಗಿ ಅವರ ಪುತ್ರ ಕಿರಣ ಕುಮಾರ ಕೊಡ್ಗಿ ಶಾಸಕರಾಗಿ ಆಯ್ಕೆಯಾಗಿದ್ದು ಪ್ರಥಮ.
ಇವರು ಮತ ಏಣಿಕೆಯ ಆರಂಭದ ಸುತ್ತಿನಿಂದಲೂ ಮುನ್ನಡೆ ಸಾಧಿಸುತ್ತಾ ಎದುರಾಳಿಗೆ ಮುನ್ನಡೆ ಸಾಧಿಸಲು ಅವಕಾಶ ನೀಡದೆ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಗೆಲುವಿನ ಹಿಂದೆ 40 ವಷ೯ಗಳಿಂದ ರಾಜಕೀಯದಲ್ಲಿ ತೊಡಗಿಸಿಕೊಂಡ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪಾತ್ರ ದೊಡ್ಡದು.






