ರಾಜಕೀಯ
ಇಂದೇ “ಗ್ಯಾರಂಟಿ” ಘೋಷಣೆ

Views: 79
ಇದುವರೆಗೆ ನಡೆದ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಚಚಿ೯ಸಿ ಗ್ಯಾರಂಟಿ ಬಗ್ಗೆ ಇಂದು ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಶುಕ್ರವಾರ ಬೆಳಿಗ್ಗೆ ಸಂಪುಟ ಸಭೆ ನಿಗದಿಯಾಗಿದ್ದರೂ ಗುರುವಾರ ತಡರಾತ್ರಿಯವರೆಗೆ ಕ್ಯಾಬಿನೆಟ್ ನೋಟ್ ಸಿದ್ಧಪಡಿಸುವಲ್ಲಿ ಸಿಬ್ಬಂದಿಗಳು ನಿರತರಾಗಿದ್ದರು ಎನ್ನಲಾಗಿದೆ. ಎರಡನೇ ಕ್ಯಾಬಿನೆಟ್ ಸಭೆಯಲ್ಲಿ ಬಹುತೇಕ ಗ್ಯಾರಂಟಿ ವಿಷಯಗಳೇ ಇರುವುದರಿಂದ ಯೋಜನೆ ಜಾರಿಗೊಳಿಸುವ ಸವಾಲುಗಳ ಬಗ್ಗೆ ಚಚಿ೯ಸಿ, ಮಾಗ೯ಸೂಚಿ ಅಂತಿಮಗೊಳಿಸಿ ತಡರಾತ್ರಿಯವರೆಗೆ ಸಮಯ ತೆಗೆದುಕೊಂಡಿದ್ದರು.
ಸಚಿವ ಸಂಪುಟ ಸಭೆಯಲ್ಲಿ ಮೊದಲ ಹಂತದಲ್ಲಿ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಗೃಹಜ್ಯೋತಿ, ಮತ್ತು ಅನ್ನಭಾಗ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಿ, ಉಳಿದ ಯೋಜನೆಗಳಾದ ಯುವನಿಧಿ, ಗೃಹಲಕ್ಷ್ಮೀಯನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುವ ಘೋಷಣೆಯನ್ನು ಮುಖ್ಯಮಂತ್ರಿಗಳು ಸಚಿವಸಂಪುಟ ಸಭೆಯ ನಂತರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.






