ಇಂದಿನಿಂದ ಮಹಿಳೆಯರಿಗೆ ಉಚಿತ ಪ್ರಯಾಣ

Views: 0
ರಾಜ್ಯದ ಮಹಿಳೆಯರು ಕನಾ೯ಟಕ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್ ಗಳಲ್ಲಿ ಭಾನುವಾರ ಮಧ್ಯಾಹ್ನ 1 ಗಂಟೆಯ ಬಳಿಕ ಉಚಿತವಾಗಿ ಪ್ರಯಾಣಿಸಬಹುದು. ಇಂದು ವಿಧಾನ ಸೌಧದ ಮುಂದೆ ಟಿಕೆಟ್ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ.
ಆದಾರ್ ಕಾಡ್೯,ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಕೇಂದ್ರ / ರಾಜ್ಯ ಸರಕಾರದ ಇತರ ಯಾವುದೇ ಗುರತು ಚೀಟಿ ಇದ್ದರೆ ಸಾಕು.
ಅಂಬಾರಿ, ಅಂಬಾರಿ ಡ್ರೀ ಕ್ಲಾಸ್, ಐರಾವತ, ಕ್ಲಬ್ ಕ್ಲಾಸ್, ರಾಜಹಂಸ, ಎಸಿ- ನಾನ್ ಎಸಿ, ಸ್ವೀಪರ್ ಬಸ್, ಅಂತರ್ ರಾಜ್ಯ ಸಾರಿಗೆ ಬಸ್ ಗಳನ್ನು ಬಿಟ್ಟು ಕೆಸ್ಆರ್ ಟಿಸಿಯ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ, ತಡೆರಹಿತ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸ ಬಹುದು.
ಸೋಮವಾರದಿಂದ ಶಕ್ತಿ ಸ್ಮಾಟ್೯ ಕಾಡ್೯ಗಳಿಗಾಗಿ ಅಜಿ೯ ಸಲ್ಲಿಕೆ ಆರಂಭವಾಗಲಿದೆ. 3 ತಿಂಗಳೊಳಗೆ ಅಜಿ೯ ಸಲ್ಲಿಸಿದವರಿಗೆ ಸ್ಮಾಟ್೯ ಕಾಡ್೯ ವಿತರಣೆಯಾಗಲಿದೆ. ಸೇವಾ ಸಿಂಧು ಪೋಟ೯ಲ್ ಗಳಲ್ಲಿ ಅಜಿ೯ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಸರಕಾರವೇ ಕಾಡ್೯ ವೆಚ್ಚ ಭರಿಸಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಸ್ಟಪಡಿಸಿದ್ದಾರೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 644 ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಲಭ್ಯವಾಗಲಿದೆ.






