ಆಟ ಆಡುತ್ತಿದ್ದಾಗ ಮಗು ದಿಢೀರ್ ಸಾವು ಮಲತಾಯಿಯಿಂದಲೇ ಕೊಲೆ ಆರೋಪ!

Views: 89
ಬೆಳಗಾವಿ: ಇಂದು ಬೆಳಗ್ಗೆ ಮನೆಯಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿ ಮೃತಪಟ್ಟಿರೋ ಘಟನೆ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ 4 ವರ್ಷದ ಮಗುವನ್ನು ಮಲತಾಯಿಯೇ ಕೊಲೆ ಮಾಡಿದ್ದಾಳೆ ಎಂಬ ಗಂಭೀರ ಆರೋಪ ಅಜ್ಜಿಯಿಂದಲೇ ಕೇಳಿ ಬಂದಿದೆ
ಮಗುವಿನ ತಾಯಿಯನ್ನು 2021ರಲ್ಲಿ ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಲಾಗಿತ್ತು. ಈಗ 4 ವರ್ಷದ ಮೊಮ್ಮಗಳನ್ನು ಕೊಲೆ ಮಾಡಿದ್ದಾರೆ. ಅದು ಮಲೆತಾಯಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೃತ ಮಗುವಿನ ತಂದೆ ರಾಯಣ್ಣ ನಾವಿ. ಬೆಳಗಾವಿ ಎಪಿಎಂಸಿ ಯಾರ್ಡ್ ಬಳಿ ಇರೋ ರಾಯಣ್ಣ ನಾವಿ CRPF ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಗು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದೆ. ಮಗು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಜ್ಜ ಹಾಗೂ ಅಜ್ಜಿ ಆಸ್ಪತ್ರೆಗೆ ದೌಡಾಯಿಸಿ ಅಳಲು ತೊಡಿಕೊಂಡಿದ್ದಾರೆ. ಇನ್ನು ಈ ಸಂಬಂಧ ಮಗುವಿನ ಅಜ್ಜ ಅಜ್ಜಿ ಪೊಲೀಸರಿಗೆ ದೂರು ನೀಡಲು ಯತ್ನಿಸಿದ್ರು. ಆದರೆ ಪೊಲೀಸ್ ಅಧಿಕಾರಿಗಳು ಮಗುವಿನ ತಂದೆ ಬರೋವರೆಗೂ ಕೇಸ್ ದಾಖಲಿಸಿಕೊಳ್ಳುವುದಿಲ್ಲ ಎಂದು ಹಿಂದೇಟು ಹಾಕುತ್ತಿದ್ದಾರೆ.






