ಆಟವಾಡುತ್ತಿದ್ದಾಗ ವಿದ್ಯುತ್ ತಗುಲಿ 9 ವರ್ಷದ ಬಾಲಕಿ ಸಾವು
Views: 23
ಕನ್ನಡ ಕರಾವಳಿ ಸುದ್ದಿ: ಆಟವಾಡುತ್ತಿದ್ದಾಗ ವಿದ್ಯುತ್ ತಗುಲಿ 9 ವರ್ಷದ ಬಾಲಕಿಯೋರ್ವಳು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.
ಇಂಗಳಿ ಗ್ರಾಮದ ನಿವಾಸಿ, ಸಾನ್ವಿ ಕಾಂಬಳೆ(9) ಮೃತಪಟ್ಟ ವಿದ್ಯಾರ್ಥಿ. ಸಂಜೆ ವೇಳೆ ಮನೆಯ ಮೇಲ್ಪಾವಣಿಯ ಮೇಲೆ ಸ್ಕಿಪಿಂಗ್ ಆಟವಾಡುತ್ತಿದ್ದಳು. ಆಟದ ಭರದಲ್ಲಿ ಸ್ಕಿಪಿಂಗ್ ಹಗ್ಗವು ಮನೆಯ ಮೇಲಿನ ಹಾದುಹೋಗಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ.
ಬಾಲಕಿ ತಂತಿ ಮೇಲೆ ಬಿದ್ದ ಹಗ್ಗವನ್ನು ತೆಗೆಯಲು ಪ್ರಯತ್ನಸಿದ್ದಾಳೆ. ಆ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿದ ಕಾರಣ ಬಾಲಕಿ ಮನೆಯ ಮೇಲಿಂದ ಕೆಳಗೆ ಬಿದ್ದಿದ್ದಾಳೆ. ಇದರಿಂದ ಗಾಬರಿಗೊಂಡ ಪೋಷಕರು ಆಕೆಯನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಸಾನ್ವಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಈ ಸಂಬಂಧ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಮನೆಯ ಮೇಲಿನ ವಿದ್ಯುತ್ ತಂತಿಗಳು ಎಷ್ಟೋಂದು ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.






