ಅಮಾಸೆಬೈಲಿನಲ್ಲಿ ವ್ಯಕ್ತಿ ಮರದ ಕೊಂಬೆಗೆ ಬಟ್ಟೆಯನ್ನು ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ
Views: 133
ಕುಂದಾಪುರ ತಾಲೂಕಿನ ಅಮಾಸೆಬೈಲಿನಲ್ಲಿ ವ್ಯಕ್ತಿಯೋರ್ವರು ಮರದ ಕೊಂಬೆಗೆ ಬಟ್ಟೆಯನ್ನು ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿ ಸುರೇಶ್ ಲಾಕ್ರಾ (39) ಎಂದು ತಿಳಿದು ಬಂದಿದೆ.
ಮೃತ ಸುರೇಶ್ ಲಾಕ್ರಾ ಅವರು ದೆಹಲಿ ರಾಜ್ಯದವರಾಗಿದ್ದು, ಸುಮಾರು ನಾಲ್ಕು ವರ್ಷಗಳಿಂದ ದೂರುದಾರರ ಮನೆಯಲ್ಲಿ ಕೃಷಿ ಕೆಲಸಮಾಡಿಕೊಂಡಿದ್ದು, ಇತ್ತೀಚಿಗೆ ಸುರೇಶ್ ಲಾಕ್ರಾವರು ಸ್ವಲ್ಪ ಮಂಕಾಗಿದ್ದು, ವಿಚಾರಿಸಿದಾಗ ತನ್ನ ಮಗನಿಗೆ ಫಿಟ್ಸ್ ಕಾಯಿಲೆ ಇದ್ದು, ಇದೇ ವಿಚಾರಕ್ಕೆ ಚಿಂತೆಯಾಗಿರುವುದಾಗಿ ತಿಳಿಸಿರುತ್ತಾರೆ.
ಅ.24 ರಂದು ಸಂಜೆ ಕೆಲಸ ಮುಗಿಸಿ ರೂಂ ಗೆ ಹೋದವರು ಬೆಳಗ್ಗೆ ಕೆಲಸಕ್ಕೆ ಬಾರದೇ ಇರುವುದನ್ನು ಕಂಡು ಹುಡುಕಾಡಿದಾಗ ತೋಟದಲ್ಲಿರುವ ಹಲಸಿನ ಮರದ ಕೊಂಬೆಗೆ ಬಟ್ಟೆಯನ್ನು ಕಟ್ಟಿ ಕುತ್ತಿಗೆಗೆ ಬಿಗಿದು ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ.ತನ್ನ ಮಗನಿಗಿರುವ ಫಿಟ್ಸ್ ಕಾಯಿಲೆಯೋ ಅಥವಾ ಬೇರೆ ಯಾವುದೋ ವಿಚಾರಕ್ಕೆ ಮನನೊಂದುನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ತಿಳಿದು ಬಂದಿದೆ
ಈ ಬಗ್ಗೆ ಅಶೋಕ್ ಕುಮಾರ್ ಕೊಡ್ಗಿ ಅಮಾಸೆಬೈಲು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಲಿಸಿ ಕೊಂಡಿರುತ್ತಾರೆ.






