ಅಪ್ರಾಪ್ತ ಬಾಲಕ ಯುವತಿಯ ಹತ್ಯೆ ಕೇಸ್‌ಗೆ ಟ್ವಿಸ್ಟ್..! ಯುವತಿ ಮೃತದೇಹದ ಬಳಿ ಡೆತ್ ನೋಟ್ ಬರೆದಿಟ್ಟಿದ್ದು ಯಾರು?

Views: 136
ಬೆಂಗಳೂರು: ನಗರದ ಸುಬ್ರಹ್ಮಣ್ಯಪುರ ಬಳಿಯ ಪ್ರಭುದ್ಧ ಎಂಬ ಯುವತಿ ಸಾವಿನ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಯುವತಿಯನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಭುದ್ಧ (20) ಯುವತಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲ ಅದಕ್ಕೆ ಯಾವುದೇ ಕಾರಣ ಇಲ್ಲ. ನನ್ನ ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಯುವತಿಯ ಹತ್ಯೆಗೆ ಕಾರಣ ಕೇಳಿದರೆ ಶಾಕ್!
ಈ ಹಿಂದೆ 15 ವರ್ಷದ ಬಾಲಕ ಮನೆಯಲ್ಲಿ 2 ಸಾವಿರ ರೂಪಾಯಿಗಳನ್ನು ಕಳ್ಳತನ ಮಾಡಿದ್ದನು. ಇದನ್ನು ನೋಡಿದ್ದ ಯುವತಿ, ನಿನ್ನ ತಂದೆ ತಾಯಿಗೆ ಹೇಳುವುದಾಗಿ ಬಾಲಕನಿಗೆ ಹೆದರಿಸಿದ್ದಳು. ಎಲ್ಲಿ ಅಪ್ಪ-ಅಮ್ಮನಿಗೆ ಹೇಳುತ್ತಾಳೋ ಎನ್ನುವ ಭಯದಲ್ಲಿ ಬಾಲಕ ಹತ್ಯೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಹಣ ಕದ್ದಿದ್ದನ್ನು ತಂದೆ, ತಾಯಿಗೆ ಹೇಳುತ್ತಾಳೆ ಎಂದು ಭಯಗೊಂಡ ಅಪ್ರಾಪ್ತ ಬಾಲಕ ಹರಿತವಾದ ಚಾಕುವಿನಿಂದ ಯುವತಿಯ ಕೈ ಹಾಗೂ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ಬಾಲಕ ಡೆತ್ ನೋಟ್ ಬರೆದಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡಂತೆ ರೂಪಿಸಿದ್ದನು. ಸದ್ಯ ಈ ಸಂಬಂಧ ಪೊಲೀಸರು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.






