ಇತರೆ
ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ಹರಿದು ಸಾವು

Views: 0
ಬಂಟ್ವಾಳ ಸಜಿಪ ಮುಗ್ನೂರಿನ ಮಲಾಯಿ ಬೆಟ್ಟು ಎಂಬಲ್ಲಿ ಶುಕ್ರವಾರ ಅಡಿಕೆ ಮರದಿಂದ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದ ವ್ಯಕ್ತಿಯೊವ೯ ಮೃತಪಟ್ಟಿದ್ದಾರೆ.
ಬೋಳಿಯಾರು ಗ್ರಾಮದ ನಿವಾಸಿ ಶಾಫಿ (28) ಮೃತಪಟ್ಟವರು, ಅಡಿಕೆಯನ್ನು ಗಿಡದಿಂದಲೇ ಕ್ರಯಕ್ಕೆ ಪಡೆದು ಬಳಿಕ ಅದನ್ನು ಕೊಯ್ಯುವ ಕೆಲಸ ಮಾಡಿಕೊಂಡಿದ್ದರು.
ಅಡಿಕೆ ಕೊಯ್ಯುವಾಗ ಕೈಯಲ್ಲಿದ್ದ ಕೋಲು ನಿಯಂತ್ರಣ ತಪ್ಪಿ ರಸ್ತೆಯ ಬದಿಯ ವಿದ್ಯುತ್ ತಂತಿಗೆ ತಾಗಿದೆ, ಅದರಲ್ಲಿ ಅಳವಡಿಸಿರುವ ಕಬ್ಬಿಣದ ಕತ್ತಿಯ ಮೂಲಕ ವಿದ್ಯುತ್ ಪ್ರವವಹಿಸಿ, ಶಾಫಿ ಸ್ಥಳದಲ್ಲೇ ಮೃತಪಟ್ಟಿದ್ದರು.






