ಜನಮನ
ಅಡಿಕೆ ಕೊಯ್ಯುವ ಕೊಕ್ಕೆ ವಿದ್ಯುತ್ ತಂತಿಗೆ ಸ್ಪಶಿ೯ಸಿ ಕೃಷಿಕ ಸಾವು

Views: 0
ಕುಂದಾಪುರ :ಕೋಣ್ಕಿಯ ಅಂಗಡಿ ಮನೆ ನಿವಾಸಿ ಭುಜಂಗ ಶೆಟ್ಟಿ (59) ಅವರು ಗುರುವಾರ ತಮ್ಮದೇ ಮನೆಯ ತೋಟದಲ್ಲಿ ಅಡಿಕೆ ಕೊಯ್ಯುವ ವೇಳೆ ಕಬ್ಬಿಣದ ಕೊಕ್ಕೆ ಹೈಟೆನ್ಶನ್ ವಯರಿನ ವಿದ್ಯುತ್ ತಂತಿಗೆ ತಾಗಿ, ವಿದ್ಯುತ್ ಸ್ಪಶಿ೯ಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನಪ್ಪಿದರು.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








