ಧಾರ್ಮಿಕ
ಅಕ್ಷಯ ತದಿಗೆ : ಸೂಯ೯-ಚಂದ್ರರ ಗರಿಷ್ಠ ಕಾಂತಿಯಿಂದ ಮಂಗಳಕರ

Views: 0
ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆಯನ್ನು ಅಕ್ಷಯ ತದಿಗೆ ಎಂದು ಆಚರಿಸಲಾಗುತ್ತದೆ.
ಅಕ್ಷಯ ಎಂದರೆ ಕ್ಷಯಿಸದೆ, ವೃದ್ಧಿಯಾಗುವುದು ಎಂದಥ೯ ಈ ದಿನ ಸೂಯ೯- ಚಂದ್ರರು ತಮ್ಮ ಗರಿಷ್ಠ ಮಟ್ಟದ ಕಾಂತಿಯನ್ನು ಹೊಂದಿರುವುದರಿಂದ ಯಾವುದೇ ಶುಭ ಕಾಯ೯ಕ್ಕೆ ಮಂಗಳಕರ.
ಕ್ಷಯ ಎಂದರೆ ನಾಶ ,ನಾಶವಿಲ್ಲದ್ದು ಅಕ್ಷಯ ನಾಶವಾಗುವುದು ತಾತ್ಕಾಲಿಕ, ನಾಶವಾಗದ್ದು ಶಾಶ್ವತ,
ಲೌಕಿಕ ಸಾಧನೆ, ಲೌಕಿಕ ಫಲ ಎರಡೂ ಕ್ಷಯ- ತಾತ್ಕಾಲಿಕ ಪಾರಮಾಥಿ೯ಕ ಸಾಧನೆ, ಪರಮ ಪುರುಷಾಥ೯ ಫಲ ಈ ಎರಡೂ ಅಕ್ಷಯ, ನಾಶವಾಗದ ಸಾಧನೆ ಮತ್ತು ಮೋಕ್ಷವೆಂಬ ಶಾಶ್ವತ ಸುಖಕ್ಕೆ ಕಾರಣ
ಅಕ್ಷಯ ತದಿಗೆಯು ಸವ೯ರಿಗೂ ಸುಖ-ಸಂತೋಷ -ಶಾಂತಿ -ಆರೋಗ್ಯ – ಸಂಪತ್ತು -ಸ್ನೇಹ ಪ್ರೀತಿಗಳು ಅಕ್ಷಯವಾಗಲಿ






