ಇತರೆ
ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಮಹಿಳೆ ಸಾವು

Views: 216
ಕನ್ನಡ ಕರಾವಳಿ ಸುದ್ದಿ; ಸ್ನಾನ ಮಾಡುತ್ತಿದ್ದಾಗಲೇ ಹೃದಯಾಘಾತವಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ, ವೆಂಕಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೀಪಾ (35) ಸಾವನ್ನಪ್ಪಿದ ಮಹಿಳೆ.
ದೀಪಾರವರು ತಾಲೂಕಿನ ವೀರಶೈವ ಸಮಾಜದ ಯುವ ವೇದಿಕೆಯ ಅಧ್ಯಕ್ಷ ಶಶಿಕುಮಾರ್ ಅವರ ಪತ್ನಿಯಾಗಿದ್ದಾರೆ. ದೀಪಾ ಹಾನುಬಾಳು ಹೋಬಳಿ ವೆಂಕಟಹಳ್ಳಿ ಗ್ರಾಮದವರೆಂದು ತಿಳಿದುಬಂದಿದೆ.
ದೀಪಾರವರು ಸ್ನಾನ ಮಾಡುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದದ್ದು ಬಳಿಕ ಸಕಲೇಶಪುರ ತಾಲ್ಲೂಕಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.






