ಇತರೆ

ಸಿನೆಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶಿಸಲು ವಿರೋಧ: ಕಾಂತಾರ-2 ಚಿತ್ರಕ್ಕೆ ಆತಂಕ!

Views: 122

ಮಂಗಳೂರು : ಸಿನೆಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶಿಸಲು ವಿರೋಧ ವ್ಯಕ್ತಪಡಿಸಿರುವ ದೈವ ನರ್ತಕರ ಸಮುದಾಯದ ಎಚ್ಚರಿಕೆಯಿಂದ ಕಾಂತಾರ-2 ಚಿತ್ರಕ್ಕೂ ಆತಂಕ ಎದುರಾಗಿದೆ.

ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿದ್ದ ಕಾಂತಾರ ಸಿನೆಮಾದ ಪಾರ್ಟ್‌ 2 ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ. ನಿರ್ದೇಶಕ ಮತ್ತು ನಾಯಕ ನಟ ರಿಷಭ್ ಶೆಟ್ಟಿ ಸಿನೆಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಈ ನಡುವೆ ದೈವಾರಾಧಕರು ಸಿನಿಮಾ ಹಾಗೂ ನಾಟಕದಲ್ಲಿ ದೈವಾರಾಧನೆ ಪ್ರದರ್ಶನ ಮಾಡಿದ್ರೆ ಚಿತ್ರ ಮಂದಿರಕ್ಕೆ ನುಗ್ಗಿ ತಡೆಯುವುದಾಗಿ ಎಚ್ಚರಿಕೆ ನೀಡಿದೆ.

ಇದೀಗ ಕಾಂತಾರ ಸಿನೆಮಾದ ಪ್ರೀಕ್ವೆಲ್‌ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಆದ್ರೆ ದೈವಾರಾಧಕರು ನೀಡಿರುವ ಎಚ್ಚರಿಕೆಯಿಂದ ಚಿತ್ರ ಬಿಡುಗಡೆಯ ಬಗ್ಗೆ ಕೊಂಚ ಆತಂಕ ಕಾಡಿದೆ.

ಇತ್ತೀಚೆಗೆ ಸಿನೆಮಾ ಹಾಗೂ ನಾಟಕದಲ್ಲಿ ದೈವಾರಾಧನೆಯ ಬಳಕೆ ಜಾಸ್ತಿಯಾಗಿದ್ದು, ಈ ಬಗ್ಗೆ ದೈವ ನರ್ತಕರ ಸಮುದಾಯ ಆಕ್ರೋಶಗೊಂಡಿದೆ. ನಮ್ಮ ಕಾನೂನಾತ್ಮಕ ಹೋರಾಟಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಅಸಹಾಯಕತೆಯನ್ನೂ ತೋಡಿಕೊಂಡಿದೆ. ಈ ನಡುವೆ ಪೊಲೀಸರಿಗೂ ದೂರು ನೀಡಿ ಇದನ್ನು ತಡೆಯುವಂತೆ ಮನವಿ ಮಾಡಿದೆ. ಇದ್ಯಾವುದಕ್ಕೂ ಬೆಲೆ ಸಿಗದೇ ಇರುವ ಕಾರಣ ಇದೀಗ ಸಿನೆಮಾ ಪ್ರದರ್ಶನವಾದರೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದೆ. ನ್ಯಾಯಯುತವಾಗಿ ನಾವು ಕೇಳಿರುವ ಬೇಡಿಕೆಗೆ ಯಾವುದೇ ಸ್ಪಂದನೆ ಸಿಗದ ಕಾರಣ ಇಂತಹ ನಿರ್ಧಾರ ಅನಿವಾರ್ಯ ಎಂದು ದೈವ ನರ್ತಕ ಸಮುದಾಯದವರು ಹೇಳಿದ್ದಾರೆ.

Related Articles

Back to top button
error: Content is protected !!