ಸಾಲಿಗ್ರಾಮ ಬಳಿ ಇರುವ ಪಾಲನ ಕೇಂದ್ರದ ಪ್ರಾಣಿ, ಪಕ್ಷಿಗಳ ಸ್ಥಳಾಂತರ

Views: 285
ಕನ್ನಡ ಕರಾವಳಿ ಸುದ್ದಿ: ಸಾಲಿಗ್ರಾಮ ದೇವಸ್ಥಾನದ ಬಳಿ ಇರುವ ಪಾಲನ ಕೇಂದ್ರದ ಪ್ರಾಣಿ, ಪಕ್ಷಿಗಳನ್ನು ಸ್ಥಳಾಂತರಿಸಲಾಯಿತು.
ಬುಧವಾರ ಬೆಳಗ್ಗೆ ಪಶು ಸಂಗೋಪನೆ ಇಲಾಖೆ ಪ್ರಮುಖರು,ಪೊಲೀಸರು ಹಾಗೂ ಪ.ಪಂ. ಅಧಿಕಾರಿಗಳೊಂದಿಗೆ ಪೆಟಾ ಮುಖ್ಯಸ್ಥ ಮೀತ್ ಅಶರ್, ಸಿಂಚನಾ ಸುಬ್ರಹ್ಮಣ್ಯ ಮತ್ತು ಸ್ವಯಂ ಸೇವಕರ ತಂಡ ಆಗಮಿಸಿತ್ತು. ಅಧಿಕಾರಿಗಳ ಸಮ್ಮುಖ ಜಾನುವಾರುಗಳು ಹಾಗೂ ಮನೆಯ ಒಂದೆರಡು ನಾಯಿಗಳನ್ನು ಹೊರತುಪಡಿಸಿ ಉಳಿದ ನಾಯಿ, ಬೆಕ್ಕು, ಗಿಳಿಗಳು, ಬಾತುಕೋಳಿ ಮುಂತಾದ ವಿವಿಧ ಜಾತಿಯ ಪ್ರಾಣಿಪಕ್ಷಿಗಳನ್ನು ವಶಕ್ಕೆ ಪಡೆದರು.
ನಾಯಿ, ಬೆಕ್ಕು, ಗಿಳಿಗಳು, ಬಾತುಕೋಳಿ ಮುಂತಾದ ವಿವಿಧ ಜಾತಿಯ ಪ್ರಾಣಿಪಕ್ಷಿಗಳನ್ನು ವಶಕ್ಕೆ ಪಡೆದರು. ಇವುಗಳನ್ನು ಪಿಲಿಕುಳ ಹಾಗೂ ಅಧಿಕೃತ ಪ್ರಾಣಿ ಸಂರಕ್ಷಣ ಕೇಂದ್ರಕ್ಕೆ ಹಸ್ತಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗದ ಬಿ.ಸುಧೀಂದ್ರ ಐತಾಳರ ಕೇಂದ್ರದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಆಹಾರ, ನೀರು, ಸ್ವಚ್ಛತೆ, ಲಸಿಕೆ, ಚಿಕಿತ್ಸೆ ಇತ್ಯಾದಿಗಳ ದಾಖಲೆಗಳು ಇಲ್ಲಿರುವುದಿಲ್ಲ. ಆದ್ದರಿಂದ ಇದು ಪ್ರಾಣಿ ಹಿಂಸೆತಡೆ ಕಾಯ್ದೆ 1960ರ ಉಲ್ಲಂಘನೆಯಾಗಿರುತ್ತದೆ.
ಕಾರ್ಯಾಚರಣೆ ಸಂದರ್ಭ ಸುಧೀಂದ್ರ ಐತಾಳ, ಅವರ ಪತ್ನಿ ಹಾಗೂ ಪುತ್ರರ ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ವಿವಿಧ ಕಾರಣಗಳಿಂದ ಗಾಯಗೊಂಡಿರುವ ಪ್ರಾಣಿಪಕ್ಷಿಗಳನ್ನು ಮನೆಗೆ ತಂದು ಮಕ್ಕಳಂತೆ ಸಾಕುತ್ತಿದ್ದೇವೆ. ಆಡಳಿತ ವ್ಯವಸ್ಥೆ ನಮಗೆ ಕಿರುಕುಳ ನೀಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕಾರ್ಯಾಚರಣೆಯನ್ನು ತಡೆಯಲು ಪ್ರಯತ್ನಿಸಿದರು.
ಕೋಟ ಠಾಣಾಧಿಕಾರಿ ರಾಘವೇಂದ್ರ ಪಿ., ಕ್ರೈಂ ವಿಭಾಗದ ಎಸ್‌ಐ ಸುಧಾಪ್ರಭು, ಎಎಸ್‌ಐ ಗೋಪಾಲ ಪೂಜಾರಿ ಹಾಗೂ ಸಿಬಂದಿ, ಮುಖ್ಯ ಪಶುವೈದ್ಯ ಡಾ| ಪ್ರದೀಪ್, ಡಾ| ಸೂರಜ್, ಸಾಲಿಗ್ರಾಮ ಪ.ಪಂ. ಆರೋಗ್ಯ ವಿಭಾಗದ ಮಮತಾ, ಕಂದಾಯ ನಿರೀಕ್ಷಕ ದೀಪಕ್, ಅರಣ್ಯ ಇಲಾಖೆಯ ಮಾಲೇಶ್ ಉಪಸ್ಥಿತರಿದ್ದರು.