ಆರೋಗ್ಯ
ಸರಕಾರಿ ಪ್ರೌಢಶಾಲೆ ವಕ್ವಾಡಿ: ಯೋಗ ದಿನಾಚರಣೆ
Views: 189
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಸರಕಾರಿ ಪ್ರೌಢಶಾಲೆ ವಕ್ವಾಡಿಯಲ್ಲಿ ಜೂನ್ 21ರಂದು ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಹಾಲಾಡಿ ಸ.ಪ.ಪೂ.ಕಾಲೇಜಿನ ಉಪನ್ಯಾಸಕರಾದ ಯೋಗ ಗುರು ಶ್ರೀ ಕುಮಾರ್ ರವರು ದೀಪ ಬೆಳಗಿಸುವುದರ ಮೂಲಕ ಯೋಗ ದಿನದ ಉದ್ಘಾಟನೆ ನೆರವೇರಿಸಿದರು.

ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಬಗ್ಗೆ ಉಪನ್ಯಾಸ ನೀಡಿ , ಮನಸ್ಸು ಬುದ್ಧಿಯನ್ಮು ನಿಯಂತ್ರಿಸಲು ಯೋಗವನ್ನು ದಿನನಿತ್ಯ ಅಭ್ಯಾಸ ಮಾಡುವಂತೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹಲವು ಆಸನಗಳ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಷ್ಟಾಂಗ ಯೋಗದಲ್ಲಿ ಬರುವ ಯಮ, ನಿಯಮ ಇವುಗಳ ಉಪಯೋಗ ತಿಳಿಸಿದರು. ವಿದ್ಯಾರ್ಥಿಗಳೂ ಯೋಗಾಭ್ಯಾಸವನ್ನು ಅಭ್ಯಾಸ ಮಾಡಿದರು.
ಶ್ರೀ ಧರ್ಮ ನಾಯ್ಕರವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕುಸುಮಾಕರ ಶೆಟ್ಟಿಯವರು ಸ್ವಾಗತಿಸಿ, ವಂದಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






