ಶಾಲೆಯಲ್ಲಿ ಗಂಡ -ಹೆಂಡತಿಯಾಗಿ ನಟನೆ ಮಾಡಿದ್ದ ಜೋಡಿ 20 ವರ್ಷಗಳ ನಂತರ ಮದುವೆ..!

Views: 188
ಕನ್ನಡ ಕರಾವಳಿ ಸುದ್ದಿ : ಇಪ್ಪತ್ತು ವರ್ಷಗಳ ಹಿಂದೆ ಶಿಶುವಿಹಾರದಲ್ಲಿ ನಡೆದ ಸಮಾರಂಭದಲ್ಲಿ ಗಂಡ – ಹೆಂಡತಿಯಾಗಿ ನಟನೆ ಮಾಡಿದ್ದ ಈ ಜೋಡಿ ಇದೀಗ ನಿಜ ಜೀವನದಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಅಪರೂಪದ ಘಟನೆ ಚೀನಾದಲ್ಲಿ ನಡೆದಿದೆ.
ಸೌತ್ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಝೇನ್ ಎಂಬ ವ್ಯಕ್ತಿ ಮತ್ತು ಅವರ ಪತ್ನಿ ಇತ್ತೀಚೆಗೆ ಗುವಾಂಗ್‌ಡಾಂಗ್ ಎಂಬ ಪ್ರದೇಶದಲ್ಲಿ ಮದುವೆಯಾಗಿದ್ದಾರೆ.
ಇದೇ ವ್ಯಕ್ತಿಗಳು 20 ವರ್ಷಗಳ ಹಿಂದೆ ಗಂಡ-ಹೆಂಡತಿ ಪಾತ್ರ ಮಾಡಿ, ಫೋಟೊಗಳಿಗೆ ಫೊಸ್ ನೀಡಿದ್ದರು. ಶಿಶುವಿವಾಹರದ ವಿಡಿಯೋದಲ್ಲಿ ಇವರ ಕ್ಲಿಪ್ ಗಳಿದ್ದು, ಇದೀಗ ಚೀನಾದಲ್ಲಿ ತುಂಬಾ ವೈರಲ್ ಆಗಿವೆ ಎಂದು ಹೇಳಲಾಗಿದೆ.
ವಧು ವರರ ಡ್ರೆಸ್ ಧರಿಸಿರುವ ಇಬ್ಬರು ಮಕ್ಕಳು ನಟನೆ ಮಾಡುವ ಕ್ಲಿಪ್‌ಗಳು ಮತ್ತು ಫೋಟೊವೊಂದಕ್ಕೆ ಪೋಸ್ ನೀಡಿರುವ ಕ್ಲಿಪ್‌ಗಳು ವಿಡಿಯೋದಲ್ಲಿ ತೋರಿಸಲಾಗಿದೆ.
ಮತ್ತೆ ಜೋಡಿಯಾದದ್ದು ಹೇಗೆ?
ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಕಾಲಾಂತರದಲ್ಲಿ ಬೇರೆ ಬೇರೆ ನಗರಗಳಿಗೆ ವಲಸೆ ಹೊಸ ಕಾರಣ ಇಬ್ಬರ ಸಂಪರ್ಕ ಕಟ್ ಆಗಿದೆ. ಬಳಿಕ ಕೆಲ ಹಳೆ ಸ್ನೇಹಿತರು ಈ ವಿಡಿಯೋ ಕ್ಲಿಪ್ ಅನ್ನು ಇಬ್ಬರಿಗೂ ಪ್ರತ್ಯೇಕವಾಗಿ ಕಳುಹಿಸಿದ್ದಾರೆ. ಇದರಿಂದ ಮತ್ತೆ ಒಂದಾದ ಜೋಡಿ ಮದುವೆ ನಿರ್ಣಯಕ್ಕೆ ಬಂದಿದ್ದಾರೆ. ಈ ಸುದ್ದಿ ಇದೀಗ ಚೀನಾದ್ಯಂತ ಸಖತ್ ವೈರಲ್ ಆಗಿದೆ.