ವಿಷ್ಣುವರ್ಧನ್ ಅಗಲಿ 14 ವರ್ಷಗಳ ನಂತರ ಮತ್ತೆ ತೆರೆಯ ಮೇಲೆ ನೋಡುವ ಭಾಗ್ಯ ಅಭಿಮಾನಿಗಳಿಗೆ!

Views: 75
ಬೆಂಗಳೂರು: ಡಾ.ವಿಷ್ಣುವರ್ಧನ್ ಅಪಾರ ಅಭಿಮಾನಿಗಳನ್ನು ಅಗಲಿ 14 ವರ್ಷ ಕಳೆದು ಹೋಗಿದೆ. ಆದರೆ ವಿಷ್ಣುದಾದ ಅವರನ್ನು ಸಿನಿಮಾ ಮೂಲಕವಾಗಿ ಮತ್ತೆ ತೆರೆ ಮೇಲೆ ನೋಡುವ ಭಾಗ್ಯ ಅಭಿಮಾನಿಗಳಿಗೆ ಬರಲಿದೆ.
ಹೊಸ ತಂತ್ರಜ್ಞಾನ ಮೂಲಕವಾಗಿ ವಿಷ್ಣುವರ್ಧನ್ ತೆರೆಯ ಮೇಲೆ ಬರುತ್ತಿದ್ದಾರೆ. ಈ ಹಿಂದೆ ರಮ್ಯಾ ನಟಿಸಿದ್ದ ನಾಗರಹಾವು ಅನ್ನೋ ಸಿನಿಮಾದಲ್ಲಿ ಹೆಡ್ ಮಾಸ್ಕ್ ತಂತ್ರಜ್ಞಾನದಲ್ಲಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು. ಈಗ ಇಂತಹದ್ದೆ ಮತ್ತೊಂದು ವಿಭಿನ್ನ ಪ್ರಯತ್ನದಲ್ಲಿ ವಿಷ್ಣುದಾದಾ ಅನಾವರಣ ಆಗುತ್ತಿದೆ.
ಆರ್.ಎಸ್.ಎಸ್ ಕಾರ್ಯಕರ್ತನ ಗೆಟಪ್ ನಲ್ಲಿ ವಿಷ್ಣುದಾದ ಅವರನ್ನು ಸಿನಿಮಾ ಮೂಲಕವಾಗಿ ಮತ್ತೆ ತೆರೆ ಮೇಲೆ ನೋಡುವ ಭಾಗ್ಯ ಅಭಿಮಾನಿಗಳಿಗೆ ಬರಲಿದೆ. ಚಿತ್ರದುರ್ಗದ ಕೋಟೆಯ ಬ್ಯಾಕ್ ಡ್ರಾಪ್ ನಲ್ಲಿ ವಿಷ್ಣುವರ್ಧನ್ ಛಾಯೆಯಲ್ಲಿ ಒಂದು ಸಿನಿಮಾ ಬರ್ತಾ ಇದೆ.
ಆ ಸಿನಿಮಾದ ಹೆಸರು ‘ಚಾಮಯ್ಯ S/O ರಾಮಾಚಾರಿ’ ಇತಿಹಾಸ ತಜ್ಞರು ನಟರು ಹಾಗೂ ನಿರ್ದೇಶಕರು ಆಗಿರುವ ಪಲ್ಲಕ್ಕಿ ರಾಮಕೃಷ್ಣ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರ್ತಾ ಇದೆ. ಚಾಮಯ್ಯ S\O ರಾಮಾಚಾರಿ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.