ಶಿಕ್ಷಣ

ವಿದ್ಯಾರ್ಥಿಗಳಿಗೆ ಶಾಕ್​! ; ಪದವಿ ಕಾಲೇಜುಗಳಲ್ಲಿ ಶೇ.10ರಷ್ಟು ಶುಲ್ಕ ಏರಿಕೆ

Views: 33

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಕಾಲೇಜು ಮತ್ತು ಯೂನಿವರ್ಸಿಟಿಗಳಲ್ಲಿ ಶೇ.10 ರಷ್ಟು ಶುಲ್ಕ ಏರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಕೋರ್ಸ್​ಗಳ ಶುಲ್ಕ ಶೇ.10 ಏರಿಕೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ಉನ್ನತ ಶಿಕ್ಷಣ ಇಲಾಖೆ ಅವಕಾಶ ಕೊಟ್ಟಿದ್ದು, ಬಿಎ, ಬಿಕಾಂ, ಬಿಎಸ್​ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ.10ರಷ್ಟು ಏರಿಕೆಗೆ ಅವಕಾಶ ನೀಡಿದೆ. ಈ ಮೂಲಕ ಸರ್ಕಾರ ವಿದ್ಯಾರ್ಥಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದೆ.

ವಿಶ್ವವಿದ್ಯಾಲಯಗಳ ಆದಾಯ ಕೊರತೆಯ ಕಾರಣ ನೀಡಿ ಪ್ರಸಕ್ತ ವರ್ಷದಲ್ಲಿ ಶೇ10% ರಷ್ಟು ಶುಲ್ಕ ಏರಿಕೆ ಮಾಡಲು ಉನ್ನತ್ತ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಮುಂದಿನ ವರ್ಷ ಪದವಿ ವಿದ್ಯಾರ್ಥಿಗಳಿಗೆ ಮತಷ್ಟು ಶುಲ್ಕ ಏರಿಕೆಯ ಹೊರೆ ಬೀಳಲಿದೆ. ಐದು ಗ್ಯಾರಂಟಿಗಳು ಜಾರಿಯಾದ ಮೇಲೆ ಹಣ ಸಂಗ್ರಹಿಸಲು ಈಗಾಗಲೇ ತೆರಿಗೆ, ಕರೆಂಟ್ ಹಾಗೂ ಇನ್ನಿತರ ಬೆಲೆ ಏರಿಕೆ ಮಾಡಿರುವ ಸರ್ಕಾರ ಇದೀಗ ಕಾಲೇಜು ಶುಲ್ಕ ಏರಿಸುವ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದೆ.

Related Articles

Back to top button