ವಿಜಯಲಕ್ಷ್ಮೀ & ಪವಿತ್ರ ಗೌಡ ನಡುವಿನ ಜಗಳ, ನಟ ದರ್ಶನ್ ಗೆ ಸಂಕಷ್ಟ!

Views: 91
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಮತ್ತು ಪವಿತ್ರ ಗೌಡ ಜಗಳ ದೊಡ್ಡ ಕಂಟಕ ತಂದಿದೆ. ಹಾಗಾದರೆ ಪವಿತ್ರ ಗೌಡ ಮಗಳ ಫೋಟೋನ ಶೇರ್ ಮಾಡುವ ಮೂಲಕ ವಿಜಯಲಕ್ಷ್ಮೀ ದರ್ಶನ್ ಇದೀಗ ಕಾನೂನು ಸಮಸ್ಯೆಗೆ ಸಿಲುಕಿದ್ದಾರಾ? ಕಾನೂನು ತಜ್ಞರು ಹೇಳುವುದು ಏನು? ಅಕಸ್ಮಾತ್ ಈಗ ಪವಿತ್ರ ಗೌಡ ಕೇಸ್ ಹಾಕಿದರೆ ದರ್ಶನ್ ಅವರ ಪತ್ನಿ ವಿರುದ್ಧ ಏನೆಲ್ಲಾ ಕೇಸ್ ಹಾಕಬಹುದು?
ಕಾನೂನು ತಜ್ಞರ ಪ್ರಕಾರ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ವಿರುದ್ಧ ಪವಿತ್ರ ಗೌಡ ಕಾನೂನು ಹೋರಾಟ ಆರಂಭಿಸಿದರೆ ದೊಡ್ಡ ಸಮಸ್ಯೆ ಸೃಷ್ಟಿ ಆಗಲಿದೆ. ಅದರಲ್ಲೂ ವಿಜಯಲಕ್ಷ್ಮೀ ದರ್ಶನ್ ಅವರು, ಪವಿತ್ರ ಗೌಡ ಅವರ ಮಗುವಿನ ಫೋಟೋನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅದರ ಜೊತೆ ಪವಿತ್ರ ಗೌಡಗೆ ಸಂಬಂಧ ಪಟ್ಟಿರುವ ಖಾಸಗಿ ಫೋಟೋ ಕೂಡ ಶೇರ್ ಮಾಡಲಾಗಿದೆ. ಈ ಮೂಲಕ ಬಹುದೊಡ್ಡದಾದ ಸಮಸ್ಯೆ ಶುರುವಾಗಬಹುದು ಎನ್ನಲಾಗಿದೆ. ಹಾಗಾದರೆ ಅಕಸ್ಮಾತ್ ಈ ಪ್ರಕರಣ ಕೋರ್ಟ್‌ನ ಮೆಟ್ಟಿಲು ಏರಿದರೆ ಯಾವೆಲ್ಲಾ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಬಹುದು.?
ಫೋಟೋಗಳನ್ನು ಒಪ್ಪಿಗೆ ಇಲ್ಲದೆಯೇ ಎಲ್ಲಿಯೂ ಪ್ರಕಟಿಸುವಂತಿಲ್ಲ. ಹಾಗೇ, ಸಾಮಾಜಿಕ ಜಾಲತಾಣದಲ್ಲೂ ಹಾಕುವಂತೆ ಇಲ್ಲ. ಅದರಲ್ಲೂ ಒಬ್ಬ ವ್ಯಕ್ತಿಯ ಖಾಸಗಿ ಫೋಟೋ ಈ ರೀತಿ ದುರ್ಬಳಕೆ ಆದರೆ ಕಾನೂನಿನಲ್ಲಿ ಅದರದ್ದೇ ಆದ ಕಠಿಣ ಕ್ರಮ ಇರಲಿದೆ. ಹೀಗಿದ್ದಾಗ ಮಕ್ಕಳ ಫೋಟೋ ವಿಚಾರದಲ್ಲಿ ಕಾನೂನು ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ. ಹಾಗಾದ್ರೆ ಈ ಕಿತ್ತಾಟದಲ್ಲಿ ಏನೆಲ್ಲಾ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ?
ಇದೀಗ ಪವಿತ್ರ ಗೌಡ ಕೇಸ್ ಹಾಕಿದರೆ, ಮೊದಲಿಗೆ ತಮ್ಮ ಮಾನಹಾನಿ ಆಗಿರುವ ಕಾರಣಕ್ಕೆ ಮಾನನಷ್ಟ ಮೊಕ್ಕದಮೆ ಹೂಡಬಹುದು. ಹಾಗೇ ಇದೀಗ ಪವಿತ್ರ ಗೌಡ ಅವರೇ ಆರೋಪ ಮಾಡಿರುವಂತೆ, ತಮ್ಮ ಮಗಳ ಫೋಟೋ ಹಾಕಿರುವ ಸಂಬಂಧ ಕೂಡ ಕಾನೂನು ಪ್ರಕಾರ ಮೊಕದ್ದಮೆ ಹೂಡಬಹುದು. ಜುವೆನೈಲ್ ಜಸ್ಟೀಸ್ ಆಕ್ಟ್ ಅಡಿಯಲ್ಲಿ ಕೇಸು ದಾಖಲಿಸೋಕೆ ಅವಕಾಶ ಇರುತ್ತದೆ. ಇದರ ಜೊತೆ ಕೆಟ್ಟದಾಗಿ ಕಮೆಂಟ್ ಹಾಕಿದ್ದಾರೆ ಎನ್ನುವ ವ್ಯಕ್ತಿಗಳಿಗೂ ಕಾನೂನು ಸಮಸ್ಯೆ ಎದುರಾಗಲಿದೆ.
ಐಟಿ ಆಕ್ಟ್ ಅಡಿಯಲ್ಲೂ ಕೇಸ್?
ಇಷ್ಟೆಲ್ಲದರ ಜೊತೆಗೆ ಐಟಿ ಆಕ್ಟ್ ಅಡಿಯಲ್ಲಿ ಕೂಡ ಕೇಸ್ ದಾಖಲಾಗುವ ಸಾಧ್ಯತೆ ಇದ್ದು, ಹಾಗೇ ಘನತೆಗೆ ಧಕ್ಕೆ, ಮಾನಸಿಕ ಹಿಂಸೆ ಆರೋಪದಡಿ ಕೂಡ ಕೇಸ್ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ ನಟ ದರ್ಶನ್ ಅವರ ಬಾಳಲ್ಲಿ ಮತ್ತೊಮ್ಮೆ ಸಂಚಲನವು ಸೃಷ್ಟಿಯಾಗಿದೆ. ಆದರೆ ಈ ಬಗ್ಗೆ ಇದುವರೆಗೂ ನಟ ದರ್ಶನ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮುಂದೆ ಏನಾಗುತ್ತೆ? ವಿಜಯಲಕ್ಷ್ಮೀ ಅವರು & ಪವಿತ್ರ ಗೌಡ ನಡುವಿನ ಜಗಳ ಎಲ್ಲಿಗೆ ಬಂದು ನಿಲ್ಲುತ್ತೆ? ಎಂಬ ಪ್ರಶ್ನೆಯ ಆಧಾರದಲ್ಲಿ ಚರ್ಚೆ ನಡೀತಿದೆ.
ಜಗಳ ಶುರುವಾಗಿದ್ದು ಎಲ್ಲಿಂದ ಗೊತ್ತೆ?
‘ಡಿ-ಬಾಸ್’ ಅಂತಾ ಅಭಿಮಾನಿಗಳಿಂದ ಕರೆಸಿಕೊಳ್ಳುವ ದರ್ಶನ್ ಅವರಿಗೆ, ಮೇಲಿಂದ ಮೇಲೆ ಸಮಸ್ಯೆ ಎದುರಾಗುತ್ತಿದೆ. ಕೌಟುಂಬಿಕ ಕಲಹವೇ ದರ್ಶನ್ ಅವರ ಸಿನಿಮಾ ಲೈಫ್‌ಗೂ ದೊಡ್ಡ ಅಡ್ಡಿ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗಲೇ ನಿನ್ನೆ ನಟ ದರ್ಶನ್ ಅವರ ಪತ್ನಿ ಗರಂ ಆಗಿ, ಪವಿತ್ರ ಗೌಡಗೆ ಎಚ್ಚರಿಕೆ ಸಂದೇಶ ನೀಡಿದ್ದರು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇಂದು, ಪವಿತ್ರ ಗೌಡ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಇಬ್ಬರ ನಡುವೆ ಈಗ ಕಾನೂನು ಸಮರ ಶುರುವಾಗುತ್ತಾ? ಅನ್ನೋ ಚರ್ಚೆಗಳು ಕೂಡ ಜೋರಾಗಿವೆ.