ಲೋಕಸಭೆ ಚುನಾವಣಾ ಹಿನ್ನಲೆ: ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ನಗದು ವಶ

Views: 67
ಬೀದರ್: ಬಸವಕಲ್ಯಾಣದಿಂದ ಮಹಾರಾಷ್ಟ್ರದ ಲಾತೂರ್‌ಗೆ ತೆರಳುತ್ತಿದ್ದ ಇಚರ್ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 14.26 ಲಕ್ಷ ರೂಪಾಯಿ ನಗದು ಸಮೇತ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹುಲಸೂರು ತಾಲೂಕಿನ ಅಂಬೇವಾಡಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಸವಕಲ್ಯಾಣದಿಂದ ಮಹಾರಾಷ್ಟ್ರದ ಲಾತೂರ್‌ಗೆ ತೆರಳುತ್ತಿದ್ದ ಇಚರ್ ಗೂಡ್ಸ್ ವಾಹನದಲ್ಲಿ 5.26 ಲಕ್ಷ ರೂಪಾಯಿ ಮೌಲ್ಯದ ಆರ್‌ಎಮ್‌ಡಿ, ವಿಮಲ್ ಪಾನ್ ಮಸಾಲಾ ಮತ್ತು ತಂಬಾಕನ್ನು ಸಾಗಿಸುತ್ತಿದ್ದರು. ಇದರ ಜೊತೆಗೆ 14.26 ಲಕ್ಷ ನಗದನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಹಣ ಹಾಗೂ ವಸ್ತುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು 12 ಲಕ್ಷ ಮೌಲ್ಯದ ವಾಹನ ಕೂಡ ಜಪ್ತಿ ಮಾಡಿದ್ದಾರೆ. ಇನ್ನು ಈ ಸಂಬಂಧ ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ವಾಹನ ಸೇರಿ ಒಟ್ಟು 31 ಲಕ್ಷ 53 ಸಾವಿರ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.