ಆರೋಗ್ಯ
ರೋಗಿಗಳಿಗೆ ಸಮಯ,ಆರ್ಥಿಕ ಪರಿಸ್ಥಿತಿಯನ್ನು ಮನಗಾಣದೆ ಶೀಘ್ರ ಪರಿಹಾರ ನೀಡಿ: ವಾಸ್ತುತಜ್ಞ ಡಾ.ಬಸವರಾಜ್ ಶೆಟ್ಟಿಗಾರ್

Views: 38
ಉಡುಪಿ:ನೊಂದು ಬಂದ ರೋಗಿಗಳಿಗೆ ಸಮಯವನ್ನು ಪರಿಗಣಿಸದೆ ಅವರ ಆರ್ಥಿಕ ಪರಿಸ್ಥಿತಿಯನ್ನೂ ಮನಗಾಣದೆ ಅವರಿಗೆ ಬಂದ ಸಮಸ್ಯೆಗೆ ಶೀಘ್ರ ಪರಿಹಾರದ ಜೊತೆಗೆ,ಸೇವಾ ಮನೋಭಾವನೆ ಹೊಂದಿದಾಗ ಮಾತ್ರ ಆ ಸಂಸ್ಥೆ ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ಖ್ಯಾತ ಪ್ರಸಂಗ ಕರ್ತ, ವಾಸ್ತು ತಜ್ಞ ಬಸವರಾಜ್ ಶೆಟ್ಟಿಗಾರ್ ಹೇಳಿದರು.
ಅವರು ಉಡುಪಿ ಸಮೀಪದ ಮೂಡುಬೆಳ್ಳೆಯಲ್ಲಿ ‘ಸಮೃದ್ಧಿ ಡಿಜಿಟಲ್ ಕ್ಲಿನಿಕಲ್ ಲ್ಯಾಬ್’ ಉದ್ಘಾಟಿಸಿ ಮಾತನಾಡಿದರು.
ಮೂಡುಬೆಳ್ಳೆಯ ಸೈಂಟ್ ಲಾರೆನ್ಸ್ ಚರ್ಚಿನ ಧರ್ಮ ಗುರುಗಳಾದ ಜಾರ್ಜ್ ಥಾಮಸ್ ಡಿ’ಸೋಜ ಆಶೀರ್ವದಿಸಿದರು.
ಪೆರ್ಡೂರಿನ ತಜ್ಞ ವೈದ್ಯರಾದ ಡಾ. ರವೀಂದ್ರ, ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಡಾ. ಬೊಮ್ಮಯ್ಯ, ಮೂಡುಬಿಳ್ಳೆಯ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿವ್ಯ ಆಚಾರ್ಯ ಉಪಸ್ಥಿತರಿದ್ದರು.
ಅನಿಲ್ ಸ್ವಾಗತಿಸಿದರು. ರಿತೇಶ್ ಕಾರ್ಯಕ್ರಮ ನಿರೂಪಿಸಿದರು. ಪವಿತ್ರ ವಂದಿಸಿದರು.