ರಾಜಕೀಯ

ರಾಜನಾಗಿ ಯಾರ ಕೈಗೂ ಸಿಗಲ್ಲ ಅನ್ನೋದು ಸುಳ್ಳು, ಜನಗಳ ಮಧ್ಯೆ ಇದ್ದು ಜನ ಸೇವೆಗೆ ಸಿದ್ಧ:ಯದುವೀರ್

Views: 46

ಟಿಕೆಟ್ ಘೋಷಣೆಯಾದ ನಂತರ ಬೆಂಗಳೂರಿನಿಂದ ನೇರವಾಗಿ ಮೈಸೂರಿಗೆ ಆಗಮಿಸಿದ ಯದುವೀರ್ ಬಿಜೆಪಿ ಕಚೇರಿಗೆ ಆಗಮಿಸಿ ಮಾಜಿ ಸಚಿವ ರಾಮದಾಸ್, ಮೈಸೂರು ನಗರ ಅಧ್ಯಕ್ಷ ಎಲ್.ನಾಗೇಂದ್ರ ಸೇರಿದಂತೆ ಹಲವರ ಮನೆಗೆ ಭೇಟಿ ನೀಡಿದರು. ಅಲ್ಲಿ ಅವರಿಗೆ ಅದ್ಧೂರಿ ಸ್ವಾಗತಿಸಿದರು. ಮಹಿಳೆಯರು ಹಾರ ಹಾಕಿ ಆರತಿ ಎತ್ತಿದರು. ಈ ಭೇಟಿ ವೇಳೆ ಕಾಲು ತೊಳೆಯಲು ಬಂದಿದ್ದಕ್ಕೆ ನಿರಾಕರಿಸಿ ನಾನು ರಾಜನಲ್ಲ ನಿಮ್ಮವರಲ್ಲೊಬ್ಬ ಅನ್ನೋ ಸಂದೇಶ ಸಾರಿದರು. ಇದೇ ವೇಳೆ ಹಲವು ನಾಯಕರನ್ನು ಭೇಟಿ ಮಾಡಿದ್ದಲ್ಲದೇ, ರಸ್ತೆ ಬದಿ ಕುಳಿತು ಟೀ ಕುಡಿದು ಗಮನ ಸೆಳೆದರು.

ಎಸಿ ರೂಮಲ್ಲಿ ಕೂರುವವನಲ್ಲ ಪ್ರತಾಪ ಸಿಂಹಗೆ ಟಾಂಗ್ ಕೊಟ್ಟ ಯದುವೀರ್

ಇನ್ನು ಸರ್ಕಾರದ ವಿರುದ್ಧ ಅನೇಕ ವಿಚಾರಗಳಲ್ಲಿ ಅರಮನೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಬಹುಶಃ ಅದೆಲ್ಲವೂ ಇನ್ನು ಬಗೆಹರಿಯಬಹುದು. ಮಹಾರಾಜರು ಅರಮನೆಯ ಎಸಿ ರೂಮಿನಿಂದ ಜನಸೇವೆಗೆ ಬರುವುದಾದರೆ ಅವರಿಗೆ ಸ್ವಾಗತ ಅಂತ ಸಂಸದ ಪ್ರತಾಪ ಸಿಂಹ ಹೇಳಿದ್ರು. ಇದಕ್ಕೆ ಯದುವೀರ್ ತಿರುಗೇಟು ನೀಡಿದ್ದಾರೆ. ಎಸಿ ರೂಮ್​ನಿಂದ ಜನರ ಮಧ್ಯೆ ಬರುವುದು ಕಷ್ಟವೇನಲ್ಲ. ನಾನು ರಾಜನಾಗಿ ಯಾರ ಕೈಗೂ ಸಿಗಲ್ಲ ಅನ್ನೋದು ಸುಳ್ಳು. ನಾನು ಜನಗಳ ಮಧ್ಯೆ ಇದ್ದು ಜನ ಸೇವೆಗೆ ಸಿದ್ಧ. ಪ್ರಧಾನಿ ಮೋದಿ, ಬಿಜೆಪಿ ಕಾರ್ಯವೈಖರಿ ಗಮನಿಸಿ‌ ಸ್ಪರ್ಧೆ ಮಾಡಿದ್ದೇನೆ. ಜನರು ಅವಕಾಶ ಕೊಟ್ಟರೆ ಮೈಸೂರು-ಕೊಡಗು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಕುಟುಂಬದ ವ್ಯಾಜ್ಯ ಕಾನೂನಿನ ಅನುಸಾರ ನಡೆಯುತ್ತದೆ. ಅದಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

Related Articles

Back to top button