ಸಾಂಸ್ಕೃತಿಕ

ಯುರೋಪ್ ಮೂಲದ ಚೆಲುವೆ ಕ್ರಿಸ್ಟೈನಾ ಪಿಸ್ಕೋವಾ 2024ರ ವಿಶ್ವ ಸುಂದರಿ ಪಟ್ಟ

Views: 57

ಮುಂಬೈ: 2024ರ ವಿಶ್ವ ಸುಂದರಿ ಪಟ್ಟವನ್ನು ಕ್ರಿಸ್ಟೈನಾ ಪಿಸ್ಕೋವಾ ಮುಡಿಗೇರಿಸಿಕೊಂಡಿದ್ದಾರೆ.

ಶನಿವಾರದಂದು ಮುಂಬೈನಲ್ಲಿ 71ನೇ ಆವೃತ್ತಿಯ ವಿಶ್ವ ಸುಂದರಿ 2024 ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಅದ್ಧೂರಿ ಸಮಾರಂಭದಲ್ಲಿ ಜೆಕ್​ ರಿಪಬ್ಲಿಕ್ (ಯುರೋಪ್)​ ಮೂಲದ ಬೆಡಗಿ ಕ್ರಿಸ್ಟೈನಾ ಪಿಸ್ಕೋವಾ ವಿಶ್ವದ ಅತ್ಯಂತ ಸುಂದರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಿಸ್​ ಲೆಬನಾನ್​​ ಯಾಸ್ಮಿನಾ ಜೈಟೌನ್​ ಮೊದಲ ರನ್ನರ್​ ಆಗಿ ಗುರುತಿಸಿಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿ 22 ವರ್ಷದ ಸಿನಿ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ.

ಇನ್ನು ಕ್ರಿಸ್ಟೈನಾ ಪಿಸ್ಕೋವಾ ಕಾನೂನು ಮತ್ತು ವ್ಯವಹಾರ ಆಡಳಿತದಲ್ಲಿ ಎರಡು ಡಿಗ್ರಿ ಅಧ್ಯಯನ ಮಾಡಿದ್ದಾರೆ. ಮಾತ್ರವಲ್ಲದೆ ಕ್ರಿಸ್ಟಿನಾ ಪಿಸ್ಕೊ ಫೌಂಡೇಶನ್​ ಅನ್ನು ಸ್ಥಾಪಿಸಿದ್ದಾರೆ.

ಮುಂಬೈನ ಜಿಯೋ ವಲ್ಡ್​​ ಕನ್ವೆನ್ಷನ್​ ಸೆಂಟರ್​ನಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರದಲ್ಲಿ ಬಾಲಿವುಡ್​ ಸೆಲೆಬ್ರಿಟಿಗಳಾದ ಕೃತಿ ಸನೋನ್​, ಪೂಜಾ ಹೆಗ್ಡೆ, ಕ್ರಿಕೆಟಿಗರಾದ ಹರ್ಭಜನ್​ ಸಿಂಗ್​, ಸಮಾಜ ಸೇವಕಿ ಅಮೃತಾ ಫಡ್ನವಿಸ್​ ಸೇರಿ ಅನೇಕ ಗಣ್ಯರು ಭಾಗಿಯಾಗಿದ್ದರು.

ಭಾರತ ಒಟ್ಟು ಆರು ಬಾರಿ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿಕೊಂಡಿದೆ. ರೀಟಾ ಫರಿಯಾ(1966), ಐಶ್ವರ್ಯ ರೈ ಬಚ್ಚನ್​ (1994), ಡಯಾನಾ ಹೇಡನ್​ (1997), ಯುಕ್ತಾ ಮುಖಿ (1999). ಪ್ರಿಯಾಂಕಾ ಜೋಪ್ರಾ ಜೋನಾಸ್​ (2000) ಮತ್ತು ಮಾನುಷಿ ಚಿಲ್ಲರ್​ (2017) ಇವರೆಲ್ಲರು ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿ ಕಿರೀಟ ಮುಡಿಗೇರಿಸಿಕೊಂಡವರು.

 

 

Related Articles

Back to top button