ಇತರೆ
ಯಕ್ಷ ಕಲಾರಾಧಕ ಬೀಜಾಡಿ ಮಂಜುನಾಥ ಶೆಟ್ಟಿಗಾರ್ ವಿಧಿವಶ

Views: 158
ಕನ್ನಡ ಕರಾವಳಿ ಸುದ್ದಿ: ಶ್ರೀ ಕ್ಷೇತ್ರ ಸೌಕೂರು ಮೇಳದವರ ಸತತ 35 ವರ್ಷಗಳ ಪರ್ಯಂತ ನಿರಂತರ ಯಕ್ಷಗಾನ ಪ್ರದರ್ಶವನ್ನು ಮಾಡಿಸಿದಂತಹ ಯಕ್ಷ ಕಲಾರಾಧಕ ಕೋಟೇಶ್ವರ ಬೀಜಾಡಿಯ ಮಂಜುನಾಥ ಶೆಟ್ಟಿಗಾರರವರು (75) ಮೇ.28 ಬೆಳಿಗ್ಗೆ ದೇವರ ಪೂಜೆಗೆ ಸಿದ್ಧತೆ ನಡೆಸುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು.
ಮಂಜುನಾಥ ಶೆಟ್ಟಿಗಾರವರು ಪ್ರತಿ ಸಂವತ್ಸರವು ಯಕ್ಷಗಾನ ಪ್ರದರ್ಶನ ದಿನದಂದು ಸಾರ್ವಜನಿಕ ಅನ್ನಸಂತರ್ಪಣೆಯನ್ನು ಮಾಡುವುದರೊಂದಿಗೆ ನೂರಾರು ಕಲಾವಿದರನ್ನು ಊರಿನ ಪ್ರತಿಭೆಗಳನ್ನು ಗುರುತಿಸಿ, ಸನ್ಮಾನಿಸಿ, ಗೌರವಿಸುತ್ತಿದ್ದರು.
ಮೃತರು ಪತ್ನಿ, 3 ಜನ ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.