ಮಾಹಿತಿ ತಂತ್ರಜ್ಞಾನ

ಮೈಸೂರು ಇನ್ಫೋಸಿಸ್ ಕಂಪನಿ ಆವರಣದಲ್ಲಿ ಚಿರತೆ ಪ್ರತ್ಯಕ್ಷ:ಕಂಪನಿ ಸಿಬ್ಬಂದಿಗಳಿಗೆ ವರ್ಕ್ ಫ್ರಂ ಹೋಂ!!

Views: 57

ಕನ್ನಡ ಕರಾವಳಿ ಸುದ್ದಿ: ಇನ್ಫೋಸಿಸ್ ಕಂಪನಿ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಆತಂಕದ ವಾತಾವರಣ ನಿರ್ಮಾಣವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಚಿರತೆ ಕಂಡುಬಂದಿದೆ. ಚಿರತೆ ಓಡಾಟ ಹಿನ್ನೆಲೆಯಲ್ಲಿ ಕಂಪನಿ ಸಿಬ್ಬಂದಿಗಳಿಗೆ ವರ್ಕ್ ಫ್ರಂ ಹೋಂ ನಿರ್ವಹಿಸುವಂತೆ ಘೋಷಿಸಿದೆ.

ಕ್ಯಾಂಪಸ್ ನಲ್ಲಿ ಚಿರತೆ ಓಡಾಡಿದ್ದು, ಚಿರತೆ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯವುದೇ ಸಿಬ್ಬಂದಿಗಳನ್ನು ಕ್ಯಾಂಪಸ್ ಒಳಗೆ ಬಿಡುತ್ತಿಲ್ಲ. ಮುಂಜಾಗೃತಾ ಕ್ರಮವಾಗಿ ಎಲ್ಲಾ ಸಿಬ್ಬಂದಿಗಳಿಗೂ ವರ್ಕ ಫ್ರಂ ಹೋಂ ನಿರ್ವಹಿಸುವಂತೆ ಕಂಪನಿ ಹ್ಯೂಮನ್ ರಿಸೋರ್ಸ್ ವಿಭಾಗ ಸೂಚಿಸಿದೆ.

Related Articles

Back to top button