ಮೈತ್ರಿ ಸಂಬಂಧ ದೆಹಲಿಗೆ ಹೋಗುವಾಗ ಜೆಡಿಎಸ್ ರಾಜ್ಯಾಧ್ಯಕ್ಷನಾದ ನನಗೆ ಒಂದು ಮಾತು ಹೇಳಬೇಕಿತ್ತು:ಸಿ.ಎಂ ಇಬ್ರಾಹಿಂ ಬೇಸರ

Views: 0
ಬೆಂಗಳೂರು:ಬಿಜೆಪಿ-ಜೆಡಿಎಸ್ ಮೈತ್ರಿ ಯಾರಿಗೆ ಬೇಕಿತ್ತು, ಜೆಡಿಎಸ್‌ಗಾ ಬಿಜೆಪಿಗಾ ಎಂದು ಪ್ರಶ್ನಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಮೈತ್ರಿ ಬಗ್ಗೆ ಮುಂದೆ ಯಾವ ತೀರ್ಮಾನ ಮಾಡಬೇಕು ಎಂಬ ಬಗ್ಗೆ ಕಾರ್ಯಕರ್ತರ ಸಭೆ ಕರೆದು ಈ ತಿಂಗಳ 6 ರಂದು ತೀರ್ಮಾನ ಮಾಡುವುದಾಗಿ ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಜೆಡಿಎಸ್‌ನ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಜತೆ ಹಲವು ಶಾಸಕರು ಮೈತ್ರಿ ಬಗ್ಗೆ ತಮ್ಮ ನೋವು ತೋಡಿಕೊಂಡಿದ್ದಾರೆ.
ಈ ಮೈತ್ರಿ ನಮಗೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ ಎಂದರು.ನಾನು ಈಗ ವಿಷಕಂಠನಾಗಿದ್ದೇನೆ. ದಿನವೂ ವಿಷ ಕುಡಿಯುತ್ತಾ ಇದ್ದೇನೆ. ಹಾಗಾಗಿ, ಏನು ಮಾಡಬೇಕು ಎಂಬ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಪಡೆದು ನಮ್ಮ ನಾಯಕರ ಗಮನಕ್ಕೆ ತರುತ್ತೇನೆ. ಈ ತಿಂಗಳ 16 ರಂದು ಕಾರ್ಯಕರ್ತರ ಸಭೆ ಕರೆದಿದ್ದೇನೆ. ತುಂಬಾ ಜನ ಬರಬೇಡಿ, ಒಂದು ಜಿಲ್ಲೆಯಿಂದ ನಾಲ್ಕೈದು ಜನ ಬನ್ನಿ ಎಂದು ಹೇಳಿದ್ದೇನೆ. ಈ ಸಭೆಯ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಹೇಳಿದ ಇಬ್ರಾಹಿಂರವರು, ನಾನು ಚುನಾವಣೆಗೆ ನಿಲ್ಲಲ್ಲ ಎಂದಿದ್ದೇನೆ, ಈಗ ಮಹಾತ್ಮಗಾಂಧಿ ಚುನಾವಣೆಗೆ ನಿಂತರೂ 20 ಕೋಟಿ ರೂ. ಬೇಕು ಎಂದರು.ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಲಾಭವಾ ನಷ್ಟವಾ ಎಂಬ ಪ್ರಶ್ನೆಗೆ ಹಾಳಾದ ಮೇಲೆ ಇವರೇ ಹೇಳುತ್ತಾ ಇವರನ್ನು ಕಟ್ಟಿಕೊಂಡು ಹಾಳಾದೆವು ಎಂದು ಲೋಕಸಭೆಗಿಂತ ವಿಧಾನಸಭೆ ಮೇಲೆ ಈ ಮೈತ್ರಿ ಪ್ರಭಾವ ಬೀರುತ್ತದೆ ಮುಂದಿನ ಸಲ 19 ಸ್ಥಾನವೂ ಬರಲ್ಲ ಎಂದರು.
ಮೈತ್ರಿ ಸಂಬಂಧ ದೆಹಲಿಗೆ ಹೋಗುವಾಗ ಜೆಡಿಎಸ್ ರಾಜ್ಯಾಧ್ಯಕ್ಷನಾದ ನನಗೂ ಒಂದು ಮಾತು ಹೇಳಬೇಕಿತ್ತು. ಈ ಮೈತ್ರಿ ಕೇವಲ ಲೋಕಸಭಾ ಚುನಾವಣೆಗಾ ಅಥವಾ ಮುಂದಿನ ಎಲ್ಲ ಚುನವಣೆಗಾ ಅದನ್ನಾದರೂ ಹೇಳಬೇಕಲ್ಲವೆ ಎಂದರು.ಈ ಮೈತ್ರಿಯಲ್ಲಿ ಬಿಜೆಪಿ ಸಿದ್ಧಾಂತ ಒಪ್ಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆಯೋ ಇಲ್ಲ ಜೆಡಿಎಸ್ ಸಿದ್ಧಾಂತ ಒಪ್ಪಿ ಬಿಜೆಪಿ ಮೈತ್ರಿ ಮಾಡಿಕೊಂಢಿದೆಯೋ ಗೊತ್ತಿಲ್ಲ ಸಂವಿಧಾನದಿಂದ ಜಾತ್ಯಾತೀತ ಸಮಾಜವಾದಿ ಪದ ತೆಗೆದಿದ್ದಾರೆ ಅದನ್ನು ಮತ್ತೆ ಇಡಬೇಕು ಎಂಬ ಚರ್ಚೆ ಮಾಡಿದ್ದೀರಾ ಎಂದು ಜೆಎಡಿಎಸ್ ನಾಯಕರನ್ನು ಪ್ರಶ್ನಿಸಿದ ಸಿ.ಎಂ. ಇಬ್ರಾಹಿಂ, ಇವತ್ತು ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವ ಶಕ್ತಿ ನಮಗೆ ಇಲ್ಲ, ಈಗ ಕೇರಳದವರು ಬಿಟ್ಟು ಹೋದರು, ಇವರೆಲ್ಲ ಹೋದ ಮೇಲೆ ನಮ್ಮ ಪರಿತ್ಥಿತಿ ಏನು? ಕರ್ನಾಟಕದಲ್ಲಿ ಮಾತ್ರ ನಾವು ಒಂಟಿಯಾಗಿ ಉಳಿಯುತ್ತೇವೆ. ಎಲ್ಲ ಘಟಕಗಳು ಹೋದ ಮೇಲೆ ನಮ್ಮ ಪಕ್ಷದ ಚಿಹ್ನೆ ಉಳಿಯುತ್ತಾ ಇದನ್ನೆಲ್ಲ ಮೈತ್ರಿಗೆ ಮುನ್ನ ಯೋಚನೆ ಮಾಡಬೇಕಿತ್ತು ಎಂದು ಇಬ್ರಾಹಿಂ ಮೈತ್ರಿ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು