ಸಾಂಸ್ಕೃತಿಕ

ಮೇಘನಾ ರಾಜ್ ಜೊತೆ ಮದುವೆ ಬಗ್ಗೆ ವಿಜಯರಾಘವೇಂದ್ರ ಹೇಳಿದ್ದೇನು!

Views: 279

ಕನ್ನಡ ಕರಾವಳಿ ಸುದ್ದಿ: ಮೇಘನಾ ರಾಜ್ ಹಾಗೂ ವಿಜಯರಾಘವೇಂದ್ರ ಎರಡನೇ ಮದುವೆ ಆಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು ಇದೀಗ ತಮ್ಮ ಎರಡನೇ ಮದುವೆ ಬಗ್ಗೆ ವಿಜಯರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಮೇಘನಾ ರಾಜ್ ಹಾಗೂ ವಿಜಯರಾಘವೇಂದ್ರ ಎರಡನೇ ಮದುವೆ ಬಗ್ಗೆ ಇತ್ತೀಚೆಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇವೆ. ಇದರಿಂದ ಮೇಘನಾ ರಾಜ್ ಸೇರಿದಂತೆ ಅವರ ಕುಟುಂಬಸ್ಥರು ಆಪ್ತರು ತುಂಬಾ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇಘನಾ ರಾಜ್ ಕೂಡ ಇದಕ್ಕೆ ಸ್ಪಷ್ಟನೆಯನ್ನು ನೀಡಿದ್ದಾರೆ. ಆದರೂ ಕೂಡ ಊಹಾಪೋಹ ಸುದ್ದಿಗಳು ಹರಿದಾಡುತ್ತಲೇ ಇವೆ. ಇದೀಗ ವಿಜಯರಾಘವೇಂದ್ರ ಈ ವಿಚಾರದಲ್ಲಿ ಮಾತನಾಡಿದ್ದಾರೆ.

‘ನಾನು ಮೇಘನಾರಾಜ್ ಅವರಿಗೆ ಸ್ನೇಹಿತ ಅಷ್ಟೇ. ಮದುವೆ ಆಗುವುದು ಸುಳ್ಳು ಸುದ್ದಿ. ನಾನು ಆ ರೀತಿ ಯೋಚನೆ ಮಾಡಲು ಸಾಧ್ಯವಿಲ್ಲ’ ಎಂದು ವಿಜಯರಾಘವೇಂದ್ರ ಕಡ್ಡಿಮುರಿದಂತೆ ಹೇಳಿಕೊಂಡಿದ್ದಾರೆ.

ಫೇಕ್ ಸುದ್ದಿಗಳನ್ನು ಮಾಡುವವರ ವಿರುದ್ಧ ಮೇಘನಾರಾಜ್ ಹಾಗೂ ವಿಜಯ ರಾಘವೇಂದ್ರ ಲೀಗಲ್ ಆಗಿ ಆಕ್ಞನ್ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ಕುರಿತಾಗಿ ಪ್ರೆಸ್ ಮೀಟ್ ತೆಗೆದುಕೊಳ್ಳುವ ಬಗ್ಗೆ ಕೂಡ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಮೇಘನಾ ರಾಜ್, ‘ಇವೆಲ್ಲಾ ಫೇಕ್ ನ್ಯೂಸ್. ನಾನು ವಿಜಯರಾಘವೇಂದ್ರ ಅವರನ್ನು ಮದುವೆ ಆಗುವ ಬಗ್ಗೆ ಯೋಚಿಸಿಲ್ಲ. ಇದು ಶುದ್ಧ ಸುಳ್ಳು ಸುದ್ದಿ. ನಾವು ಸಿನಿಮಾದಲ್ಲಿ ಸ್ನೇಹಿತರು ಅಷ್ಟೆ. ನಮ್ಮಿಬ್ಬರ ನಡುವೆ ಆ ರೀತಿ ಯಾವುದೇ ಭಾವನೆಗಳು ಇಲ್ಲ’ ಎಂದಿದ್ದಾರೆ.

 

Related Articles

Back to top button