ಮುಂದಿನ 6 ತಿಂಗಳಲ್ಲಿ ಹೊಸ ಆದಾಯ ತೆರಿಗೆ ಪರಿಚಯ…ಏನಿರಲಿದೆ?

Views: 157
ನವದೆಹಲಿ: ಮುಂದಿನ 6 ತಿಂಗಳಲ್ಲಿ ಹೊಸ ಆದಾಯ ತೆರಿಗೆ ಕಾಯಿದೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. 1961ರ ಆದಾಯ ತೆರಿಗೆ ಕಾಯಿದೆ ತೆರೆಮರೆಗೆ ಸರಿಯಲಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆ ವ್ಯವಸ್ಥೆಯನ್ನು ಸರಳೀಕರಣ ಮಾಡಲು ಹೊಸ ಕಾಯಿದೆ ಜಾರಿಗೆ ತರಲಾಗುತ್ತಿದೆ. ಹೊಸ ಕಾಯಿದೆಯ ಕೆಲವು ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಸುಲಭವಾಗಲಿದೆ. ಹೊಸ ಕಾಯ್ದೆಯಲ್ಲಿ ಸ್ಪಷ್ಟ ಸರಳ ಭಾಷೆಯಲ್ಲಿ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ತೆರಿಗೆ ಪಾವತಿದಾರರಲ್ಲಿ ಭಯ ಮತ್ತು ಆತಂಕ ಹೋಗಲಾಡಿಸುವ ನಿಟ್ಟಿನಲ್ಲಿ ಸರಳ ಭಾಷೆಯಲ್ಲಿ ವ್ಯವಹರಿಸುವಂತೆ ಆದಾಯ ತೆರಿಗೆ ಇಲಾಖೆಗೆ ನಿರ್ಮಲಾ ಸೀತಾರಾಮನ್ ಸೂಚಿಸಿದ್ದಾರೆ.
ಆದಾಯ ತೆರಿಗೆ ದಿನಾಚರಣೆಯಲ್ಲಿ ಭಾಗಿಯಾದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಿಮ್ಮ ಅಧಿಕಾರವನ್ನು ಎಚ್ಚರಿಕೆಯಿಂದ ಬಳಸಿ ಎಂದಿದ್ದಾರೆ. ತೆರಿಗೆ ಪಾವತಿದಾರರಿಗೂ ಯಾವುದೇ ರೀತಿಯಲ್ಲಿ ಕಿರುಕುಳ ಆಗದಂತೆ ವರ್ತಿಸಿ ಎಂದು ಸಲಹೆ ನೀಡಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಸಿಬಿಡಿಟಿ ಅಧ್ಯಕ್ಷ ರವಿ ಅಗರವಾಲ್ ವಿವಾದಗಳನ್ನು ತಗ್ಗಿಸಿ, ತೆರಿಗೆ ಪಾವತಿಯಲ್ಲಿ ಖಚಿತತೆ ನೀಡಲು ಹೊಸ ಕಾಯಿದೆ ಜಾರಿಗೆ ತರಲಾಗಿದ್ದು. ಇದು ಸುಲಭವಾಗಿ ಓದಲು ಅರ್ಥ ಮಾಡಿಕೊಳ್ಳಲು ಅನುಕೂಲವಾಗುದೇ ಬದಲಾವಣೆ ಹಿಂದಿರುವ ಮೂಲ ಉದ್ದೇಶ ಎಂದು ಹೇಳಿದ್ದಾರೆ.