ಸಾಮಾಜಿಕ
ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಕುಸಿದು ಬಿದ್ದ ಮಹಿಳೆ

Views: 197
ಕನ್ನಡ ಕರಾವಳಿ ಸುದ್ದಿ: ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಕುಸಿದು ಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಹೃದಯಾಘಾತಕ್ಕೆ ಬಲಿಯಾಗಿರುವ ಈ ಮಹಿಳೆಯ ಹೆಸರು ಪರಿಣಿತ ಜೈನ್( 23)
ಪರಿಣಿತ ಜೈನ್ ಸಂಬಂಧಿಕರ ಅದ್ಧೂರಿ ಮದುವೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಾ ಇತ್ತು. ಈ ಸಂಭ್ರಮಕ್ಕೆ 200ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಮದುವೆ ಮನೆಯ ಸ್ಟೇಜ್ ಮೇಲೆ ಪರಿಣಿತ ಜೈನ್, ಹಿಂದಿಯ ಫೇಮಸ್ ಶರರಾ, ಶರರಾ ಹಾಡಿಗೆ ನೃತ್ಯ ಮಾಡುತ್ತಿದ್ದರು.
ಪರಿಣಿತ ಜೈನ್ ಅವರು ಶರರಾ, ಶರರಾ ಹಾಡಿಗೆ 30 ಸೆಕೆಂಡ್‌ಗಳು ಡ್ಯಾನ್ಸ್ ಮಾಡಿದ್ದರು. ಆಮೇಲೆ ಇದ್ದಕ್ಕಿದ್ದಂತೆ ವೇದಿಕೆ ಮೇಲೆ ಕುಸಿದು ಬಿದ್ದರು. ಪರಿಣಿತ ಜೈನ್ ಹಠಾತ್ ಬಿದ್ದಿದ್ದನ್ನು ನೋಡಿದ ಸಂಬಂಧಿಕರ ಗಾಬರಿಯಾಗಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರಿಣಿತ ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ.