ಇತರೆ

ಮದುವೆಯಾದ 45 ದಿನಕ್ಕೇ ಗಂಡನನ್ನು ಕೊಲ್ಲಿಸಿದ ಪತ್ನಿ!

Views: 146

ಕನ್ನಡ ಕರಾವಳಿ ಸುದ್ದಿ: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ 25 ವರ್ಷದ ವ್ಯಕ್ತಿಯೊಬ್ಬರನ್ನು ಪತ್ನಿ ಕೊಲೆ ಮಾಡಿದ್ದಾಳೆ. ಇವರ ಮದುವೆಯಾಗಿ 45 ನೇ ದಿನಕ್ಕೆ ಕೊಲೆ ಮಾಡಿದ್ದಾಳೆ. ಪೊಲೀಸರ ಪ್ರಕಾರ, ನವವಿವಾಹಿತೆ ಗುಂಜಾ ದೇವಿ ತನ್ನ ಸ್ವಂತ ಚಿಕ್ಕಪ್ಪ ಜೀವನ್ ಸಿಂಗ್ (55) ಜೊತೆ ಸಂಬಂಧ ಹೊಂದಿದ್ದಳು. ಶೂಟರ್‌ಗಳನ್ನು ನೇಮಿಸಿಕೊಂಡು ತನ್ನ ಪತಿ ಪ್ರಿಯಾಂಶು ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಳು.

ಗುಂಜಾ ದೇವಿ ಹಾಗೂ ಸಿಂಗ್‌ ಇಬ್ಬರೂ ಸಂಬಂಧದಲ್ಲಿದ್ದರು. ಪರಸ್ಪರ ಮದುವೆಯಾಗಲು ಬಯಸಿದ್ದರು ಆದರೆ ಅವರ ಕುಟುಂಬಗಳು ಅದಕ್ಕೆ ಒಪ್ಪಿರಲಿಲ್ಲ. ದೇವಿಯ ಕುಟುಂಬವು ಎರಡು ತಿಂಗಳ ಹಿಂದೆ ನಬಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ವಾನ್ ಗ್ರಾಮದ ನಿವಾಸಿ ಪ್ರಿಯಾಂಶು ಎಂಬಾತನಿಗೆ ಅವಳನ್ನು ಬಲವಂತವಾಗಿ ಮದುವೆ ಮಾಡಿದ್ದರು. “ಜೂನ್ 25 ರಂದು, ಪ್ರಿಯಾಂಶು ತನ್ನ ಸಹೋದರಿಯನ್ನು ಭೇಟಿ ಮಾಡಿ ರೈಲಿನಲ್ಲಿ ಮನೆಗೆ ಬರುತ್ತಿದ್ದಾಗ ನವಿ ನಗರ ನಿಲ್ದಾಣದಲ್ಲಿ ಇಳಿದಿದ್ದರು. ದೇವಿಗೆ ತನ್ನನ್ನು ಕರೆದುಕೊಂಡು ಹೋಗಲು ಯಾರನ್ನಾದರೂ ಬೈಕ್‌ನಲ್ಲಿ ಕಳುಹಿಸುವಂತೆ ಹೇಳಿದ್ದರು.

ರೈಲ್ವೇ ನಿಲ್ದಾಣದಿಂದ ಮನೆಗೆ ಹೋಗುವಾಗ, ಇಬ್ಬರು ವ್ಯಕ್ತಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸುತ್ತಿದ್ದಂತೆ, ದೇವಿ ಗ್ರಾಮದಿಂದ ಪರಾರಿಯಾಗಲು ಯತ್ನಿಸಿದ್ದು, ಪ್ರಿಯಾಂಶು ಕುಟುಂಬ ಸದಸ್ಯರಲ್ಲಿ ಅನುಮಾನ ಮೂಡಿಸಿತು. ದೇವಿಯ ಫೋನ್‌ ಕಾಲ್‌ಗಳನ್ನು ಪರಿಶೀಲನೆ ನಡೆಸಿದ್ದರು. ಅವಳು ತನ್ನ ಚಿಕ್ಕಪ್ಪನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾಳೆಂದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಪ್ಪನ ಪೋನ್‌ ಟ್ರಾಪ್‌ ಮಾಡಿದಾಗ ಆತ ಶೂಟರ್‌ಗಳ ಜೊತೆ ಮಾತನಾಡಿದ್ದು ಕಂಡು ಬಂದಿದೆ. ಕೊಲೆಯ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಪ್ರಿಯಾಂಶು ಮತ್ತು ದೇವಿ ಅವರ ವಿವಾಹವಾದ 45 ದಿನಗಳ ನಂತರ ಈ ಕೊಲೆ ನಡೆದಿದೆ. ದೇವಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.

 

Related Articles

Back to top button