ಮಣೂರು- ಮಣೂರು ಚಿತ್ತಾರಿ ನಾಗ ಬ್ರಹ್ಮ ಪರಿವಾರ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ

Views: 56
ಕೋಟ: ಇಲ್ಲಿನ ಮಣೂರು ಚಿತ್ತಾರಿ ನಾಗ ಬ್ರಹ್ಮ ಪರಿವಾರ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವ ಗುರುವಾರ ಶ್ರೀ ಕ್ಷೇತ್ರದಲ್ಲಿ ಜರಗಿತು.
ಆ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ವೇ.ಮೂ ಮಧುಸೂದನ್ ಬಾಯರಿ ನೇತೃತ್ವದಲ್ಲಿ ನೆರವೆರಿತು.
ವಿಶೇಷವಾಗಿ ಶ್ರೀ ದೇವರಿಗೆ ಬೆಳ್ಳಿಯ ಮುಖವಾಡ ಹಾಗೂ ಪ್ರಭಾವಳಿಯನ್ನು ಸಮರ್ಪಿಸಲಾಯಿತು.
ಶ್ರೀ ಕ್ಷೇತ್ರದ ಟ್ರಸ್ಟಿಗಳಾದ ಕೆ.ರಮೇಶ್ ನಾರಾಯಣ ಪ್ರಭು ಬ್ರಹ್ಮ ದೇವರ ಮುಖವಾಡ ,ಪ್ರಭಾವಳಿಯನ್ನು ಕೆ.ವೆಂಕಟೇಶ ಬಾಲಕೃಷ್ಣ ಪ್ರಭು ಶ್ರೀ ದೇವರಿಗೆ ಅರ್ಪಿಸಿದರು.
ಮಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿಕೊಂಡು ಮೆರವಣಿಗೆಯ ಮೂಲಕ ಶ್ರೀ ದೇಗುಲಕ್ಕೆ ಕರೆತರಲಾಯಿತು.
ಅಪರಾಹ್ನ ಮಹಾಅನ್ನಸಂತರ್ಪಣೆ ವಿವಿಧ ಭಜನಾ ತಂಡಗಳಿಂದ ಭಜನೆ,ಮಹಾರಂಗಪೂಜಾ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಪ್ರಭು,ಟ್ರಸ್ಟಿಗಳಾದ ಗೋಪಾಲ ಪೈ,ರಂಗನಾಥ ಪೈ,ನಾಗಪ್ಪಯ್ಯ ಪ್ರಭು,ನಿತ್ಯಾಂದ ಪ್ರಭು,ಉಮೇಶ್ ಪ್ರಭು,ಸ್ಥಳೀಯರಾದ ಜನಾರ್ದನ ಆಚಾರ್,ಶ್ರೀಧರ ಆಚಾರ್,ಸುರೇಶ್ ಆಚಾರ್,ದಿವಾಕರ ಆಚಾರ್,ದಿನೇಶ್ ಆಚಾರ್,ಲಕ್ಷ್ಮಣ ಆಚಾರ್,ಕೃಷ್ಣಯ್ಯ ಆಚಾರ್,ಸುಭಾಷ್ ಪೈ,ದಿವ್ಯಾ ಪ್ರಭು,ನಾರಾಯಣ ಆಚಾರ್ ವಿಶ್ವಕರ್ಮ ಮಹಿಳಾ ಸಮಾಜ ಮತ್ತಿತರರು ಉಪಸ್ಥಿತರಿದ್ದರು.
ಇಲ್ಲಿನ ಮಣೂರು ಚಿತ್ತಾರಿ ನಾಗ ಬ್ರಹ್ಮ ಪರಿವಾರ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವದ ಪ್ರಯುಕ್ತ ಶ್ರೀ ದೇವರಿಗೆ ಬೆಳ್ಳಿಯ ಮುಖವಾಡ ಹಾಗೂ ಪ್ರಭಾವಳಿಯನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ಶ್ರೀ ದೇಗುಲಕ್ಕೆ ಕರೆತರಲಾಯಿತು. ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ ಪ್ರಭು,ಟ್ರಸ್ಟಿಗಳಾದ ಗೋಪಾಲ ಪೈ,ರಂಗನಾಥ ಪೈ,ನಾಗಪ್ಪಯ್ಯ ಪ್ರಭು,ನಿತ್ಯಾಂದ ಪ್ರಭು,ಉಮೇಶ್ ಪ್ರಭು,ಸ್ಥಳೀಯರಾದ ಜನಾರ್ದನ ಆಚಾರ್ ಮತ್ತಿತರರು ಇದ್ದರು.