ಸಾಂಸ್ಕೃತಿಕ

ಮಂಥರೆ’ಯಾಗಿ ಯಕ್ಷಗಾನ ಹಾಸ್ಯ ಪಾತ್ರದಲ್ಲಿ  ಮಿಂಚಿದ ಉಮಾಶ್ರೀ… ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ!

Views: 162

ಕನ್ನಡ ಕರಾವಳಿ ಸುದ್ದಿ: ರಂಗಭೂಮಿ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ ಪ್ರಸಿದ್ಧಿ ಪಡೆದಿರುವ ಉಮಾಶ್ರೀ ಇದೇ ಮೊದಲ ಬಾರಿಗೆ ಯಕ್ಷಗಾನ ರಂಗಸ್ಥಳದಲ್ಲಿ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿದ್ದಾರೆ. ಹೊನ್ನಾವರದ ಸೈಂಟ್ ಆಂಟನಿ ಮೈದಾನದಲ್ಲಿ ಜ.17ರ ಶುಕ್ರವಾರ ರಾತ್ರಿ ಪೆರ್ಡೂರು ಅನಂತಪದ್ಮನಾಭ ಯಕ್ಷಗಾನ ಮಂಡಳಿಯ ಯಕ್ಷಗಾನದಲ್ಲಿ ವಿಶೇಷ ಅತಿಥಿ ಕಲಾವಿದೆಯಾಗಿ ಭಾಗಿಯಾಗಿದ್ದಾರೆ.

“ಶ್ರೀ ರಾಮ ಪಟ್ಟಾಭಿಷೇಕ” ಪ್ರಸಂಗದಲ್ಲಿ ಹಾಸ್ಯಗಾರರು ನಿಭಾಯಿಸುವ ಮತ್ತು ಸವಾಲು ಕೂಡ ಇರುವ ಕ್ಲಿಷ್ಟಕರ ಪಾತ್ರ ಮಂಥರೆಯ ಪಾತ್ರದಲ್ಲಿ ಉಮಾಶ್ರೀ ಮಾತು, ಅಭಿನಯಕ್ಕೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಹೊಡೆದಿದ್ದಾರೆ.

ಮೇಳದ ಸ್ತ್ರೀವೇಷಧಾರಿ ಸುಬ್ರಹ್ಮಣ್ಯ ಯಲಗುಪ್ಪ ಕೈಕೇಯಿ ಹಾಗೂ ಉಮಾಶ್ರೀ ಮಂಥರೆ ಪಾತ್ರಗಳ ಸಂವಾದ ಗಮನ ಸೆಳೆದಿದೆ. ಯಕ್ಷಗಾನ ರಂಗದಲ್ಲಿ ಹೆಜ್ಜೆ ಹಾಕುವ ಮೊದಲು ಉಮಾಶ್ರೀ ಅವರು ಬೆಂಗಳೂರಿನಲ್ಲಿ ಯಕ್ಷಗಾನದ ಹಾಡು, ಕುಣಿತದ ಅಭ್ಯಾಸ ಮಾಡಿಕೊಂಡಿದ್ದರು ಎಂಬುದು ಗಮನಿಸಬೇಕಾದ ವಿಚಾರ

480ಕ್ಕೂ ಹೆಚ್ಚು ಚಲನಚಿತ್ರ, ನೂರಾರು ನಾಟಕಗಳಲ್ಲಿ ನಟಿಸಿ ಹೆಸರು ಮಾಡಿರುವ ಉಮಾಶ್ರೀ ಮೊದಲ ಬಾರಿಗೆ ಯಕ್ಷಗಾನ ವೇಷದಲ್ಲಿ ಮಿಂಚಿದ್ದಾರೆ.

68 ನಿಮಿಷಗಳ ಕಾಲ ವೇದಿಕೆಯಲ್ಲೇ ಇದ್ದು, ಉಮಾಶ್ರೀ ಯಕ್ಷಗಾನ ವೇದಿಕೆಯಲ್ಲಿ ನೋಡಲೆಂದು ಹೊನ್ನಾವರದ ಹಳ್ಳಿಗಳಿಂದ, ಅಕ್ಕಪಕ್ಕದ ತಾಲ್ಲೂಕುಗಳಿಂದ, ಮಾತ್ರವಲ್ಲದೆ ವಿಟ್ಲ, ಉಡುಪಿ, ಕುಂದಾಪುರ, ಪುತ್ತೂರು, ಹೊಸಂಗಡಿ ಭಾಗದಿಂದಲೂ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಸೇರಿದ್ದರು.

ಯಕ್ಷಗಾನದಲ್ಲಿ ಅಭಿನಯಿಸುವ ಅಸೆಯಾಗಲಿ, ನಿರೀಕ್ಷೆಯಾಗಲಿ ಇರಲಿಲ್ಲ. ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಹಲವು ದಿನದಿಂದ ಯಕ್ಷಗಾನ ಪಾತ್ರ ಮಾಡುವಂತೆ ಒತ್ತಾಯಿಸುತ್ತಿದ್ದರು. ಅವರ ತಂದೆ ಯಕ್ಷಗಾನ ಕ್ಷೇತ್ರದ ದಿಗ್ಗಜ ಕಲಾವಿದ ರಾಮಚಂದ್ರ ಚಿಟ್ಟಾಣಿ ಅವರು ನನ್ನನ್ನು ಮಂಥರೆಯ ಪಾತ್ರದಲ್ಲಿ ನೋಡಲು ಬಯಸಿದ್ದರಂತೆ. ಹಿರಿಯ ಜೀವದ ಆಸೆ ಈಡೇರಿಸಿದ ಸಂತೃಪ್ತಿ ಸಿಕ್ಕಿದೆ’ ಎಂದು ಉಮಾಶ್ರೀ ಪ್ರತಿಕ್ರಿಯಿಸಿದರು.

Related Articles

Back to top button