ಇತರೆ

ಮಂಗಳೂರು:ನವವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Views: 149

ಕನ್ನಡ ಕರಾವಳಿ ಸುದ್ದಿ:ನವವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪೂಜಾಶ್ರೀ (23) ನೇಣಿಗೆ ಶರಣಾದ ಮಹಿಳೆ. ಪೂಜಾಶ್ರೀ ಪುತ್ತೂರಿನ ಕಾಣಿಯೂರು ಗ್ರಾಮದ ಬಾಕಿಮಾರು ನಿವಾಸಿಯಾಗಿದ್ದು, ಬೆಳ್ತಂಗಡಿಯ ಪಡಂಗಡಿ ಬರಾಯ ನಿವಾಸಿ ಪ್ರಕಾಶ್ ಎಂಬವರನ್ನು 10 ತಿಂಗಳ ಹಿಂದೆ ವಿವಾಹವಾಗಿದ್ದರು. ಕೆಲಸ ಅರಸುವ ಸಲುವಾಗಿ ಕಳೆದ ಎರಡು ತಿಂಗಳ ಹಿಂದೆ ಪೂಜಾಶ್ರೀಯನ್ನು ಪತಿ ಪ್ರಕಾಶ್ ಬೆಂಗಳೂರಿನಲ್ಲಿರೋ ತನ್ನ ಸಂಬಂಧಿಕರ ಮನೆಗೆ ಕಳುಹಿಸಿಕೊಟ್ಟಿದ್ದರು.

ಸಂಬಂಧಿಕರ ಮನೆಯಲ್ಲೇ ಇದ್ದ ಪೂಜಾಶ್ರೀ ಅಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಜಾಶ್ರೀ ಆತ್ಮಹತ್ಯೆ ಬಗ್ಗೆ ಆಕೆಯ ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಬೆಂಗಳೂರಿನ ಜಾಲಹಳ್ಳಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button