ಯುವಜನ

ಭರ್ಜರಿ ಉದ್ಯೋಗ ಅವಕಾಶ :14,298 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಇಲಾಖೆ

Views: 155

ಬೆಂಗಳೂರು: ಡಿಪ್ಲೋಮಾ, ಐಟಿಐ ಮುಗಿಸಿದವರಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿದೆ ಭರ್ಜರಿ ಅವಕಾಶ. ರೈಲ್ವೆ ರಿಕ್ರೂಟ್‌ಮೆಂಟ್‌ ಬೋರ್ಡ್ ಖಾಲಿ ಇರುವ ಬರೋಬ್ಬರಿ 14,298 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

18 ಕೆಟಗರಿಗಳಲ್ಲಿ 9,144 ಟೆಕ್ನಿಷಿಯನ್ (ಗ್ರೇಡ್‌ 1, 3) ಹುದ್ದೆಗಳನ್ನು ಭರ್ತಿ ಮಾಡಲು ಫೆಬ್ರವರಿಯಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಆದರೆ ನಂತರದಲ್ಲಿ ಇನ್ನೂ ಹಲವು ವರ್ಕ್‌ಶಾಪ್‌, ಡಿವಿಷನ್‌ಗಳಿಂದ ಹೆಚ್ಚುವರಿ 22 ಕೆಟಗರಿಗಳಲ್ಲಿ ಟೆಕ್ನಿಷಿಯನ್ ಹುದ್ದೆಗಳಿಗೆ ಬೇಡಿಕೆ ಸಲ್ಲಿಕೆಯಾದ ಕಾರಣ ಇದೀಗ ಒಟ್ಟಾರೆ 40 ಕೆಟಗರಿಗಳಲ್ಲಿ 14,298 ಹುದ್ದೆಗಳ ಭರ್ತಿಗೆ ರೈಲ್ವೇ ನೇಮಕಾತಿ ಮಂಡಳಿ ಅರ್ಜಿ ಅಹ್ವಾನಿಸಿದೆ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಟೆಕ್ನಿಷಿಯನ್ ಗ್ರೇಡ್ I ಸಿಗ್ನಲ್ (ಓಪನ್ ಲೈನ್)- 1,092 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ, ಬಿ.ಎಸ್‌ಸಿ, ಬಿಇ / ಬಿ.ಟೆಕ್‌

ಟೆಕ್ನಿಷಿಯನ್ ಗ್ರೇಡ್ III (ಓಪನ್ ಲೈನ್) 8,052 ಹುದ್ದೆ, ವಿದ್ಯಾರ್ಹತೆ: 10, 12ನೇ ತರಗತಿ, ಐಟಿಐ

ಟೆಕ್ನಿಷಿಯನ್ ಗ್ರೇಡ್ III (ವರ್ಕ್ ಶಾಪ್ & ಪಿಯು) 5,154 ವಿದ್ಯಾರ್ಹತೆ: 10, 12ನೇ ತರಗತಿ, ಐಟಿಐ

ವಯೋಮಿತಿ ಮತ್ತು ಅರ್ಜಿ ಶುಲ್ಕ

ಟೆಕ್ನಿಷಿಯನ್ ಗ್ರೇಡ್ I ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 18-36 ಮತ್ತು ಟೆಕ್ನಿಷಿಯನ್ ಗ್ರೇಡ್ III ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 18-33 ವರ್ಷದೊಳಗಿರಬೇಕು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ / ಎಸ್‌ಟಿ ವಿಭಾಗದ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಮಾಜಿ ಯೋಧರು / ಪಿಡಬ್ಲ್ಯುಬಿಡಿ / ಮಹಿಳೆಯರು / ತೃತೀಯ ಲಿಂಗಿಗಳು / ಇಬಿಎಸ್‌ ಅಭ್ಯರ್ಥಿಗಳು 250 ರೂ. ಮತ್ತು ಇತರ ಅಭ್ಯರ್ಥಿಗಳು 500 ರೂ. ಪಾವತಿಸಬೇಕು.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ ಟೆಕ್ನಿಷಿಯನ್‌ ಗ್ರೇಡ್‌ I ಹುದ್ದೆಗಳಿಗೆ 29,200 ರೂ. ಮತ್ತು ಟೆಕ್ನಿಷಿಯನ್‌ ಗ್ರೇಡ್‌ III ಹುದ್ದೆಗಳಿಗೆ 19,900 ರೂ. ಮಾಸಿಕ ವೇತನ ದೊರೆಯಲಿದೆ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್‌ 6

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (https://www.rrbapply.gov.in/)

ಹೆಸರು ನೋಂದಾಯಿಸಿ ಲಾಗಿನ್‌ ಆಗಿ.

ಇಲ್ಲಿ ಕಂಡುಬರುವ ಅಪ್ಲಿಕೇಷನ್‌ ಫಾರಂ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.

ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ.

ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.

ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

ಭವಿಷ್ಯದ ಅಗತ್ಯಗಳಿಗೆ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: indianrailways.gov.inಗೆ ಭೇಟಿ ನೀಡಿ.

Related Articles

Back to top button