ಕನ್ನಡ ಕರಾವಳಿ ಸುದ್ದಿ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವ ವಿದ್ಯಾನಿಲಯ ಮೈಸೂರು ಇವರ ಆಶ್ರಯದಲ್ಲಿ ನಡೆದ 2024ನೇ ಸಾಲಿನ ಭರತನಾಟ್ಯ ಜ್ಯೂನಿಯರ್ ಪರೀಕ್ಷೆ ಯಲ್ಲಿ ಕಿನ್ನಿಮೂಲ್ಕಿಯ ತನಿಷ್ಕ್ ದಾಸ್ ಶೆಟ್ಟಿಗಾರ್ ಇವರು ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಿನ್ನಿಮೂಲ್ಕಿಯ ತುಳಸಿದಾಸ್, ಹರಿಣಾಕ್ಷಿ ದಂಪತಿಯ ಪುತ್ರ. ಶ್ರುತಿ ಭಟ್ ಉದ್ಯಾವರ ಇವರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.