ಆರೋಗ್ಯ
ಬ್ರಹ್ಮಾವರ ಕುಂಜಾಲಿನಲ್ಲಿ ಆಯುರ್ವೇದಿಕ್ ಸೆಂಟರ್ ಮೇಲೆ ದಾಳಿ ಬಿಕಾಂ ಆಯುರ್ವೇದಿಕ್ ವೈದ್ಯ ಅರೆಸ್ಟ್

Views: 280
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಂಜಾಲು ಎಂಬಲ್ಲಿ ಆಯುರ್ವೇದಿಕ್ ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ ಬಿಕಾಂ ಪದವೀಧರ ರಾಗಿರುವ ಸಂದೇಶ ರಾವ್ ಅವರು ತಾನು ಆಯುರ್ವೇದಿಕ್ ವೈದ್ಯ ಎಂದು ಆಯುರ್ವೇದಿಕ್ ಸೆಂಟರ್ ತೆರೆದಿರುವುದು ಪತ್ತೆಯಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ ಆಸ್ಪತ್ರೆ, ಕ್ಲಿನಿಕ್, ಲ್ಯಾಬ್ ಗಳ ಮೇಲೆ ದಾಳಿ ನಡೆಸಿ ಬಿಕಾಂ ಪದವೀಧರರು ಆಯುರ್ವೇದಿಕ್ ಸೆಂಟರ್ ತೆರೆದು ಡಾಕ್ಟರ್ ಎಂದು ಹೇಳಿದವರನ್ನು ಅರೆಸ್ಟ್ ಮಾಡಿದ್ದಾರೆ ಜೊತೆಯಲ್ಲಿ ಇತರ ನಕಲಿ ವೈದ್ಯರು ಸಿಕ್ಕಿಬಿದ್ದಿದ್ದಾರೆ.
ಉಡುಪಿ ಜಿಲ್ಲೆಯ ಏಳು ಕಡೆ ಅಧಿಕಾರಿಗಳು ನಡೆಸಿದ್ದು ಈ ವೇಳೆ ಬಿಕಾಂ ಪದವೀಧರ ಆಯುರ್ವೇದಿಕ್ ಅಲೋಪತಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು ಬಯಲಾಗಿದೆ.
ಆಯುರ್ವೇದ ಸೆಂಟರ್ ಮೇಲೆ ಸೀಜ್ ಮಾಡಿರುವ ಅಧಿಕಾರಿಗಳು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.