ರಾಜಕೀಯ

ಫೈರ್ ಬ್ರ್ಯಾಂಡ್​ ಅನಂತ್ ಹೆಗಡೆಗೆ ಟಿಕೆಟ್ ಮಿಸ್.. ಮನವೊಲಿಕೆಗೆ ಬಂದ ನಾಯಕರ ಮೇಲೆ ಫುಲ್ ಗರಂ ಆದ ಅನಂತ್ ನಡೆ ಕೂತೂಹಲ..!

Views: 92

ಉತ್ತರ ಕನ್ನಡದ ಲೋಕ ಸಭಾ ಟಿಕೆಟ್​ ಮಿಸ್​ ಮಾಡಿಕೊಂಡಿರುವ ಅನಂತ್​ ಕುಮಾರ್ ಹೆಗಡೆ​ ನಡೆ ಬಿಜೆಪಿಗೆ ಹೊಸ ತಲೆನೋವಾಗಿದೆ. ಹೈಕಮಾಂಡ್​ ಸೂಚನೆ ಮೇರೆಗೆ ಮನವೊಲಿಕೆಗೆ ಮುಂದಾದ ನಾಯಕರ ಮೇಲೆ ಫುಲ್ ಗರಂ ಆದ ಅನಂತ್.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್​ ಮಿಸ್​ ಆಗ್ತಿದ್ದಂತೆ ಅನಂತ್ ಕುಮಾರ್​ ಹೆಗಡೆ ಕೆಂಡಕಾರಿದ್ದಾರೆ. ಟಿಕೆಟ್​ ಕೈಪ್ಪಿದ ವಿಚಾರ ತಿಳಿಯುತ್ತಿದ್ದಂತೆ ಹೆಗಡೆ ಸ್ವಪಕ್ಷದ ವಿರುದ್ಧವೇ ತಿರುಗಿ ಬೀಳುವ ಸಂದೇಶ ರವಾನಿಸಿದ್ದಾರೆ.

ಅನಂತ್​ ಕುಮಾರ್​ ಹೆಗಡೆ ಮುನಿಸು ಕೇಸರಿ ಪಾಳಯಕ್ಕೆ ಮತ್ತೊಂದು ಮಗ್ಗುಲ ಮುಳ್ಳಾಗುವ ಪರಿಸ್ಥಿತಿ ಎದುರಾಗಿದೆ. ಹೆಗಡೆ ಮುನಿಸಿಗೆ ಮುಲಾಮು ಹಚ್ಚುವ ಕೆಲಸಕ್ಕೂ ಬಿಜೆಪಿ ಹೈಕಮಾಂಡ್​ ಕೈಹಾಕಿದೆ. ಉತ್ತರ ಕನ್ನಡ ಲೋಕಸಭೆ ಟಿಕೆಟ್​ ಮಿಸ್​ ಆಗಿದ್ದಕ್ಕೆ ಅನಂತ್​ಕುಮಾರ್ ಹೆಗಡೆ ರಾಂಗ್ ಆಗಿದ್ದಾರೆ ಅನ್ನೋ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಅಲರ್ಟ್ ಆಗಿತ್ತು.

ಅನಂತ್​ ಕುಮಾರ್ ಹೆಗಡೆ ಮನವೊಲಿಸಿ ಅಂತ ಹರತಾಳು ಹಾಲಪ್ಪಗೆ ಬಿಜೆಪಿ ಹೈಕಮಾಂಡ್ ಕರೆ ಮೂಲಕ ಸಂದೇಶ ರವಾನಿಸಿತ್ತು. ಹೈಕಮಾಂಡ್ ಸೂಚನೆಯಂತೆ ಹೆಗಡೆ ಮನೆಗೆ ಹಾಲಪ್ಪ ಭೇಟಿ ನೀಡಿದ್ದರು. ಈ ವೇಳೆ ಹಾಲಪ್ಪ ಮೇಲೆ ಅನಂತ್ ಕುಮಾರ್ ಹೆಗಡೆ ಇರಿಸುಮುರಿಸುಗೊಂಡರು. ಬಂದಿದ್ದೇನು ಅಂತ ಹಾಲಪ್ಪಗೆ ಹೆಗಡೆ ಪ್ರಶ್ನೆ ಮಾಡಿದರು. ನಿಮ್ಮನ್ನು ನೋಡಲು ಬಂದೆ ಎಂದು ಹೇಳಿದ್ದ ಹರತಾಳು ಹಾಲಪ್ಪಗೆ, ನೋಡಿದ್ದು ಆಯ್ತಲ್ಲ ಹೊರಡಿ ಎಂದು ಅನಂತ್‌ಕುಮಾರ್ ಗರಂ ಆಗಿಯೇ ಪ್ರತ್ಯುತ್ತರ ನೀಡಿದರು. ಅಲ್ಲದೇ ಹೆಗಡೆ ಜೊತೆಗಿನ ಹರತಾಳು ಹಾಲಪ್ಪ ಫೋಟೋವನ್ನು ಹಾಲಪ್ಪ ಆಪ್ತ ಸಹಾಯಕ ಕ್ಲಿಕ್ಕಿಸಿದರು. ಇದಕ್ಕೆ ಸಿಟ್ಟಿಗೆದ್ದ ಹೆಗಡೆ, ಹಾಲಪ್ಪ ಆಪ್ತ ಸಹಾಯಕನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡ ತಮ್ಮ ಆಪ್ತ ಸಹಾಯಕನಿಗೆ ಕೊಟ್ಟು, ಫೋಟೋ ಡಿಲೀಟ್ ಮಾಡುವಂತೆ ಸೂಚಿಸಿದರು

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್​ ಒಲಿಸಿಕೊಂಡಿರೋ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಹೆಗಡೆ ಮನವೊಲಿಕೆಗೆ ಮುಂದಾಗಿದ್ದರು. ಆದರೆ ಕಾಗೇರಿ ಬಂದು ಅರ್ಧ ಗಂಟೆ ಬಾಗಿಲು ಕಾದರೂ ಹೆಗಡೆ ಬಾಗಿಲು ತೆರೆಯದೇ ಹಾಗೆ ಇದ್ದರು. ಹಲವು ಬಿಜೆಪಿ ನಾಯಕರು ಹೆಗಡೆ ಮನೆಗೆ ಭೇಟಿ ನೀಡಿ ಮುಚ್ಚಿದ ಕದದ ದರ್ಶನ ಪಡೆದು ವಾಪಸ್ಸಾದರು.

ಮುನಿಸಿಗೆ ಮುಲಾಮು ಹಚ್ಚುತ್ತಿದ್ದ ಬಿಜೆಪಿಗೆ ಹೆಗಡೆ ಮುನಿಸು ಸವಾಲಾಗಿದೆ. ಅನಂತ್​ ಕುಮಾರ್​ ಹೆಗಡೆ ಟಿಕೆಟ್​ ಕಿಚ್ಚು ಜ್ವಾಲೆಯಾಗಿ  ಭೀತಿ ಬಿಜೆಪಿಗೆ ಎದುರಾಗಿದೆ. ಈ ಮಧ್ಯೆ ಹಿಂದೂ ಫೈರ್ ಬ್ರ್ಯಾಂಡ್​ ನಾಯಕನ ಮುಂದಿನ ನಡೆ ಏನು ಅನ್ನೋದು ಸಹ ಕೂತೂಹಲ ಕೆರಳಿಸಿದೆ.

Related Articles

Back to top button