ಕರಾವಳಿ

ಪ್ರವೀಣ್ ನೆಟ್ಟಾರು ಹತ್ಯೆ: 21ನೇ ಆರೋಪಿ ಬಂಧನ

Views: 80

ಕನ್ನಡ ಕರಾವಳಿ ಸುದ್ದಿ :ಬಿಜೆಪಿ ಯುವಮೋರ್ಚಾದ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.ಅತೀಕ್ ಅಹಮದ್ ಬಂಧಿತ ಆರೋಪಿ.

ಪ್ರವೀಣ್ ಹತ್ಯೆ ಹಿಂದಿನ ಮುಖ್ಯ ಸಂಚುಕೋರ ಎಂದು ಗುರುತಿಸಲಾದ ಮುಸ್ತಫಾ ಪೈಚಾರ್ ಗೆ ಆಶ್ರಯ ನೀಡಿದ್ದ ಅತೀಕ್ ಅಹಮದ್‌ನನ್ನು ಪ್ರಕರಣದಲ್ಲಿ 21ನೇ ಆರೋಪಿ ಎಂದು ಗುರುತಿಸಲಾಗಿತ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕತ್ವದ ಅಡಿ ಕೆಲಸ ಮಾಡಿದ್ದ ಅತೀಕ್ ಅಹಮದ್, ಹತ್ಯೆ ಪ್ರಕರಣದ ಮುಖ್ಯ ಸಂಚುಕೋರ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ. ಹಾಗೂ ಪ್ರವೀಣ್‌ ನೆಟ್ಟಾರು ಹತ್ಯೆ ಯ ಬಳಿಕ ಮುಸ್ತಫಾ ಫೈಚಾ‌ರ್ ಚೆನ್ನೈಗೆ ಪರಾರಿಯಾಗಲು ನೆರವಾಗಿದ್ದ. ಜನರಲ್ಲಿ ಅಹಮದ್ ಭಯವುಂಟು ಮಾಡಲು ಮತ್ತು ಕೋಮುಗಲಭೆಯನ್ನು ಪ್ರಚೋದಿಸಲು ಪಿಎಫ್‌ ಐನ ಅಜೆಂಡಾದ ಭಾಗವಾಗಿ ಪ್ರವೀಣ್ ನೆಟ್ಟಾರು ಹತ್ಯೆಗೆ ಮುಸ್ತಫಾ ಪೈಚಾರ್ ಸಂಚು ರೂಪಿಸಿ ಕಾರ್ಯಗತಗೊಳಿಸಿದ್ದ. ಮೇ 2024ರಲ್ಲಿ ಮುಸ್ತಫಾ ಪೈಚಾರ್‌ನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು.

2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್‌ಐ ಕಾರ್ಯಕರ್ತರು ಮತ್ತು ಸದಸ್ಯರು ಹತ್ಯೆ ಮಾಡಿದ್ದರು. ಪ್ರಕರಣ ಗಂಭೀರತೆ ಅರಿತ ಎನ್‌ಐಎ ಆಗಸ್ಟ್ 4ರಂದು ತನಿಖೆ ಯನ್ನು ಕೈಗೆತ್ತಿಕೊಂಡಿತ್ತು. ಪ್ರಕರಣದಲ್ಲಿ ಇದುವರೆಗೆ ತಲೆಮರೆಸಿಕೊಂಡಿರುವ 23 ಆರೋಪಿಗಳ ವಿರುದ್ಧ ತನಿಖಾಧಿಕಾರಿಗೆ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಿದ್ದರು. ಇನ್ನುಳಿದ ಆರು ಆರೋಪಿಗಳಿಗಾಗಿ ಎನ್‌ಐಎ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

Related Articles

Back to top button