ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ಗೆ ಬಲಿಯಾಗಿದ್ದು ಸುಳ್ಳು, ಮಾಜಿ ಗಂಡ ಅಸಲಿ ಸತ್ಯ ಬಿಚ್ಚಿಟ್ರು!

Views: 80
ವಿವಾದಗಳ ಮೂಲಕವೇ ಇಡೀ ದೇಶಾದ್ಯಂತ ಸುದ್ದಿಯಾದವರು ಬಾಲಿವುಡ್ ನಟಿ ಪೂನಂ ಪಾಂಡೆ. ಇವರು ತನ್ನ ವೃತ್ತಿ ಜೀವನ ಮಾತ್ರವಲ್ಲ ಪರ್ಸನಲ್ ಲೈಫ್ನಲ್ಲೂ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು. ಎಂದೂ ಇವರ ಪರ್ಸನಲ್ ಲೈಫ್ನಲ್ಲೂ ಖುಷಿಯಿಂದ ಇದ್ದವರಲ್ಲ.
ನಾಲ್ಕ ವರ್ಷಗಳ ಹಿಂದೆ ನಿರ್ಮಾಪಕ ಸ್ಯಾಮ್ ಬಾಂಬೆ ಎಂಬವರ ಜೊತೆ ಪೂನಂ ಮದುವೆಯಾಗಿದ್ದರು. ಸ್ಯಾಮ್ ಬಾಂಬೆಗೆ ಇಬ್ಬರು ಮಕ್ಕಳು. ಈ ವಿಚಾರ ಗೊತ್ತಿದ್ರೂ ಪ್ರೀತಿಸಿ ಉದ್ಯಮಿ ಸ್ಯಾಮ್ ಬಾಂಬೆರನ್ನು ಪೂನಂ ವರಿಸಿದ್ದರು. ಯಾರ ಕಣ್ಣು ಬಿತ್ತೋ ಇವರ ಸಂಬಂಧ ಹೆಚ್ಚು ದಿನ ಉಳಿಯಲೇ ಇಲ್ಲ.
ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರು ಮಧ್ಯೆ ಜಗಳ ಶುರುವಾಗಿತ್ತು. ಕಂಟ್ರೋಲ್ ತಪ್ಪಿದ್ದ ಸ್ಯಾಮ್ ಪೂನಂ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದರು. ಪೂನಂ ಗಂಭೀರವಾಗಿ ಗಾಯಗೊಂಡಿದ್ದರು. ಹೀಗಾಗಿ ಸ್ಯಾಮ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಅಂದಿನಿಂದ ಸ್ಯಾಮ್ ಪೂನಂ ಸುದ್ದಿಗೆ ಬಂದೇ ಇರಲಿಲ್ಲ. ಈಗ ಕೊನೆಗೂ ಪೂನಂಗೆ ಸಪೋರ್ಟ್ ಮಾಡಿ ಮಾತಾಡಿದ್ದಾರೆ ಸ್ಯಾಮ್.
ಪೂನಂ ಪಾಂಡೆ ಬಗ್ಗೆ ಅಸಲಿ ಸತ್ಯವೇನು?
ಗರ್ಭಕಂಠದ ಕ್ಯಾನ್ಸರ್ಗೆ ತಾನು ಬಲಿಯಾಗಿರುವುದಾಗಿ ಪೂನಂ ಪಾಂಡೆ ಸುಳ್ಳುಸುದ್ದಿ ಹಬ್ಬಿಸಿದ್ದರು. ಇದು ನಿಜ ಎಂದು ಭಾವಿಸಿ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಆಘಾತ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ನಾನು ಸತ್ತಿಲ್ಲ, ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸೋ ಸಲುವಾಗಿ ಹೀಗೆ ಮಾಡಿದ್ದೆ ಎಂದು ಪೂನಂ ಹೇಳಿದ್ದರು. ಈ ವಿಚಾರದಲ್ಲಿ ಪೂನಂ ಪಾಂಡೆ ಬೆಂಬಲಕ್ಕೆ ಸ್ಯಾಮ್ ನಿಂತಿದ್ದಾರೆ.
ನನಗೆ ಅವಳು ಅಂದರೆ ಇಷ್ಟ. ಅವಳು ಇಲ್ಲ ಎಂಬ ಸುದ್ದಿ ಕೇಳಿ ನನಗೆ ಏನು ಅನಿಸಲಿಲ್ಲ. ಕಾರಣ ಅವಳ ಸಾವಿನ ಸುದ್ದಿ ನಾನು ನಂಬಲೇ ಇಲ್ಲ. ಯಾವಾಗಲೂ ಅವಳ ಬಗ್ಗೆ ಯೋಚಿಸುತ್ತೇನೆ. ತನ್ನ ಇಮೇಜನ್ನು ಪಕ್ಕಕ್ಕಿಟ್ಟು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಪೂನಂ ಹೀಗೆ ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂದರು ಸ್ಯಾಮ್.