ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಶ್ರೀ ಸುಶ್ರೀಂದ್ರ ತೀರ್ಥರು ಆನೆಗುಡ್ಡೆ ಶ್ರೀ ವಿನಾಯಕ ದೇವರ ದರ್ಶನ

Views: 22
ಕುಂದಾಪುರ:ಇದೇ ಜ.18 ರಂದು ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಕಿರಿಯ ಶ್ರೀಗಳಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀ ಪಾದಂಗಳವರು ಶನಿವಾರ ಸಂಜೆ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಶ್ರೀಗಳು ಉಪಾಧ್ಯಾಯ ಕುಟುಂಬದ ಸದಸ್ಯರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಸಂಸ್ಥಾನ ದೇವರ ಪೆಟ್ಟಿಗೆಗೆ ಪೂಜೆ ನೆರವೇರಿಸಿದರು.
ಆಡಳಿತ ಮೊಕ್ತೇಸರ ಶ್ರೀ ಶ್ರೀರಮಣ ಉಪಾಧ್ಯಾಯರು ಹಾಗೂ ಪರ್ಯಾಯ ಅರ್ಚಕರಾದ ಶ್ರೀ ಶ್ರೀ ಷ ಉಪಾಧ್ಯಾಯರು ದೇವಳದ ವತಿಯಿಂದ ಶ್ರೀಗಳಿಗೆ ಮಾಲಿಕೆ ಮಂಗಳಾರತಿ ನೆರವೇರಿಸಿ ಪಾದಪೂಜೆ ಮಾಡಿ ಗೌರವ ಪಾದ ಕಾಣಿಕೆಯನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ವಿಶ್ರಾಂತ ದರ್ಮದರ್ಶಿಗಳಾದ ಶ್ರೀಯುತ ಕೆ. ಸೂರ್ಯನಾರಾಯಣ ಉಪಾಧ್ಯಾಯರು ಆನೆಗುಡ್ಡೆ ಶ್ರೀ ಕ್ಷೇತ್ರದ ಕಿರುಪರಿಚಯವನ್ನು ವಿವರಿಸಿ ಮುಂದಿನ ಎರಡು ವರ್ಷಗಳ ಪರ್ಯಾಯ ವೈಭವದಿಂದ ಯಶಸ್ವಿಯಾಗಿ ನಡೆದು ಲೋಕಕಲ್ಯಾಣವಾಗಲಿ ಎಂದು ಪ್ರಾರ್ಥಿಸದರು.
ಶ್ರೀ ಗಳು ವಿಶ್ವನಾಮಕ ವಿಶ್ವಂಭರ ಪರಮಾತ್ಮನ ಹಾಗೂ ಶ್ರೀ ವಿಠಲ ಹಾಗೂ ಶ್ರೀ ಕೃಷ್ಣದೇವರ ಅನುಗ್ರಹ ಸದಾ ಆಗುವುದರೊಂದಿಗೆ ಮುಂದೆ ನಡೆಯುವ ಪರ್ಯಾಯಕ್ಕೆ ಆಮಂತ್ರಿಸಿ ಅನುಗ್ರಹಿಸಿದರು
ಈ ಸಂದರ್ಭದಲ್ಲಿ ದರ್ಮದರ್ಶಿಗಳಾದ ವಿಠಲ ಉಪಾಧ್ಯಾಯ ಹಾಗೂ ಕೆ ನಿರಂಜನ ಉಪಾಧ್ಯಾಯ, ಅರ್ಚಕ ಮಂಡಳಿಯ ಸರ್ವ ಸದಸ್ಯರು ಹಾಗೂ ದೇವಳದ ಸಿಂಭದಿಗಳು ಉಪಸ್ತಿತರಿದ್ದು ಶ್ರೀ ಗಳಿಂದ ಫಲ ಮಂತ್ರಾಕ್ಷತೆ ಪಡೆದು ಧನ್ಯರಾದರು.