ಶಿಕ್ಷಣ

ನ್ಯಾಕ್ ಗ್ರೇಡ್ ಕೊಡಲು ಲಂಚ ಪಡೆದ ವಿವಿ ಪ್ರಾಧ್ಯಾಪಕಿ ಬಂಧನ

Views: 55

ಕನ್ನಡ ಕರಾವಳಿ ಸುದ್ದಿ: ಲಂಚ ಪಡೆದ ಹಿನ್ನಲೆ ದಾವಣಗೆರೆ ವಿಶ್ವವಿದ್ಯಾಲಯದ ಪ್ರೊ.ಗಾಯತ್ರಿ ದೇವರಾಜ್ರನ್ನು ಹೈದರಾಬಾದ್ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ದಾಳಿ ವೇಳೆ 37 ಲಕ್ಷ ರೂ. ನಗದು, 6 ಲ್ಯಾಪ್ಟಾಪ್, ಐಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಭ್ರಷ್ಟಾಚಾರ, ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿದೆ.

ದಾವಣಗೆರೆ ವಿವಿಯ ಮೈಕ್ರೋ ಬಯಾಲಜಿ ಪ್ರಾಧ್ಯಾಪಕಿಯಾಗಿರುವ ಗಾಯತ್ರಿ, ನ್ಯಾಕ್ ಸಮಿತಿಯ ಸದಸ್ಯೆ ಕೂಡ ಆಗಿದ್ದಾರೆ. ಆಂಧ್ರದ ಗುಂಟೂರಿನ ಕೆಎಲ್ಇಎಫ್ ವಿಶ್ವವಿದ್ಯಾಲಯದ ನ್ಯಾಕ್ ಕಮಿಟಿ ಪರಿಶೀಲನೆ ವೇಳೆ ಲಂಚ ಪಡೆಯುವಾಗ ಬಂಧಿಸಲಾಗಿದೆ.

Related Articles

Back to top button