ಸಾಂಸ್ಕೃತಿಕ

ನಿಶ್ಚಿತಾರ್ಥ ಮಾಡಿಕೊಂಡ ʻಮಾಣಿಕ್ಯʼನಟಿಯ ಭಾವಿ ಪತಿಗೆ ಇದು 2ನೇ ಮದುವೆ..?

Views: 50

ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರು ಆರ್ಟ್ ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ ಅವರೊಂದಿಗೆ ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ನಿಕೋಲಾಯ್ ಸಚ್‌ದೇವ್ ಅವರಿಗೆ ಇದು ಎರಡನೇ ಮದುವೆ ಎನ್ನಲಾಗಿದೆ.

ಬಹುಭಾಷಾ ನಟ ಶರತ್‌ಕುಮಾರ್ ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜತೆಗೆ 38ನೇ ವಯಸ್ಸಿನಲ್ಲಿ ಎಂಗೇಜ್‌ ಆಗಿದ್ದಾರೆ. ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರು ಆರ್ಟ್ ಗ್ಯಾಲರಿಸ್ಟ್ ನಿಕೋಲಾಯ್ ಸಚ್‌ದೇವ್ ಅವರೊಂದಿಗೆ ಮಾರ್ಚ್ 1ರಂದು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ನಿಕೋಲಾಯ್ ಸಚ್‌ದೇವ್ ಅವರಿಗೆ ಇದು ಎರಡನೇ ಮದುವೆ ಎನ್ನಲಾಗಿದೆ.

ನಿಕೋಲಾಯ್ ಸಚ್‌ದೇವ್ ಅವರು ಮಾಡೆಲ್ ಕವಿತಾ ಅವರನ್ನು ಮದುವೆಯಾಗಿದ್ದರು. 2010ರಲ್ಲಿ ಮಿಸ್ ಗ್ಲಾಡ್ರಾಗ್ಸ್ ಆಗಿ ಹೊರಹೊಮ್ಮಿದ್ದರು. 2007 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಮಿಸ್ ಗ್ಲೋಬ್ 2011 ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರಿಗೆ 15 ವರ್ಷದ ಮಗಳೂ ಸಹ ಇದ್ದಾರೆ ಎಂದು ವರದಿಯಾಗಿದೆ. ಈ ಜೋಡಿಗೆ ಮದುವೆ ಬಳಿಕ ಹೊಂದಾಣಿಕೆ ಸಮಸ್ಯೆ ಎದುರಾಗಿತ್ತು. ಹೀಗಾಗಿ ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಆ ಬಳಿಕ ವರಲಕ್ಷ್ಮಿ ಜೊತೆ ಡೇಟಿಂಗ್ ಶುರುವಿಟ್ಟುಕೊಂಡಿದ್ದರು. ನಿಕೋಲಾಯ್ ಹಾಗೂ ಕವಿತಾ ವಿಚ್ಛೇದನದ ಬಳಿಕವಷ್ಟೇ ವರಲಕ್ಷ್ಮಿ ಜೊತೆ ಡೇಟಿಂಗ್ ಶುರುವಾಗಿತ್ತು ಎಂದು ವರದಿಯಾಗಿವೆ

Related Articles

Back to top button